filter: 0; fileterIntensity: 0.0; filterMask: 0; captureOrientation: 0; algolist: 0; multi-frame: 0; brp_mask:0; brp_del_th:null; brp_del_sen:null; motionR: 0; delta:null; bokeh:0; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 305.53375;aec_lux_index: 0;albedo: ;confidence: ;motionLevel: 0;weatherinfo: null;temperature: 35; 
ಜಿಲ್ಲೆ

ಮಾಜಿ ಸಚಿವ ನಾಯಕ ಸ್ಮರಣೆ ನಾಳೆ ನಾಡಿದ್ದು

ಸುರಪುರ: ಸಗರನಾಡಿನ ಸಾಂಸ್ಕೃತಿಕ ರಾಯಭಾರಿ ಎಂದೇ ಖ್ಯಾತರಾಗಿದ್ದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರ ೫ನೇ ಪುಣ್ಯಸ್ಮರಣೆ ನಿಮಿತ್ತ ಇಲ್ಲಿನ ಕನ್ನಡ ಸಾಹಿತ್ಯ ಸಂಘದಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ವಿವಿಧ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಹೇಳಿದರು.

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ೨೬ರಂದು ಬೆಳಗ್ಗೆ ೧೧ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ಯುವ ಮುಖಂಡ ರಾಜಾ ಹರ್ಷವರ್ಧನ ನಾಯಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಸಾಸಂ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕಸಾಸA ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾದ ಖ್ಯಾತ ನಾಟಕಕಾರ ಕವಿ ಮಲ್ಲೇಶಿ ಕೋನಾಳ ಅವರಿಗೆ ವಿಶೇಷ ಸನ್ಮಾನ. ವಾಗ್ಮಿ ಮುಫ್ತಿ ಇಕ್ಬಾಲ್ ಅಹ್ಮದ್ ಅವರು ಸುರಪುರದ ಸಾಂಸ್ಕೃತಿಕ ವಾತಾವರಣ ಕುರಿತು ಉಪನ್ಯಾಸ ನೀಡಲಿದ್ದಾರೆ. ಖ್ಯಾತ ಕ್ಯಾನ್ಸರ್ ತಜ್ಞ ಡಾ.ಮಾಜೀದ್ ತಾಳಿಕೋಟಿ ರಂಗAಪೇಟೆ ಮಾತನಾಡುವರು.

ಭಾನುವಾರ ಬೆಳಗ್ಗೆ ೧೦ಕ್ಕೆ ರಾಜಾ ಮದನಗೋಪಾಲ ನಾಯಕ ಅವರ ಪುತ್ಥಳಿಗೆ ಪುಷ್ಪಾರ್ಜನೆ. ಅಂತಾರಾಷ್ಟಿçÃಯ ಖ್ಯಾತಿಯ ಗರುಡಾದ್ರಿ ಕಲಾವಿದ ವಿಜಯ್ ಹಾಗರಗುಂಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಹಿರಿಯ ನ್ಯಾಯವಾದಿ, ಕಸಾಸಂ ಹಿರಿಯ ಸದಸ್ಯ ಉಸ್ತಾದ್ ಫಿರಾಸಹ್ ಹುಸೇನ್ ಅವರಿಗೆ ನುಡಿ ನಮನ ಏರ್ಪಡಿಸಲಾಗಿದೆ. ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಜಯಲಲಿತಾ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಜಾಲವಾದಿ, ಕೋಶಾಧ್ಯಕ್ಷ ಪ್ರಕಾಶಚಂದ ಜೈನ್, ಕಾರ್ಯದರ್ಶಿ ರಾಜಶೇಖರ ದೇಸಾಯಿ, ರಾಘವೇಂದ್ರ ಭಕ್ರಿ ಇದ್ದರು.