ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡಲು ಸಹಕರಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹಾಗೂ ತಿ.ನರಸೀಪುರದ ಮುಖಂಡರು ಸನ್ಮಾನಿಸಿದರು. 
ಜಿಲ್ಲೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಸನ್ಮಾನ

ತಿ.ನರಸೀಪುರ: ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡಲು ಸಹಕರಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹಾಗೂ ತಿ.ನರಸೀಪುರದ ಮುಖಂಡರು ಸನ್ಮಾನಿಸಿದರು.

ದೇವೇಗೌಡರ ಬೆಂಗಳೂರಿನ ನಿವಾಸಕ್ಕೆ ಇತ್ತೀಚೆಗೆ ಶ್ರೀಗಳೊಂದಿಗೆ ಭೇಟಿ ನೀಡಿದ ಮುಖಂಡರು, ದೇವೇಗೌಡರ ಕೊಡುಗೆಯನ್ನು ಸ್ಮರಿಸಿದರು. ಉರಿಲಿಂಗ ಪೆದ್ದಿಮಠದ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ಕರ್ನಾಟಕ ರಾಜ್ಯ ವಾಲ್ಮೀಕಿ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ಹಾಗೂ ವರುಣ ಕ್ಷೇತ್ರದ ನಿಕಟಪೂರ್ವ ಜೆಡಿಎಸ್ ಅಧ್ಯಕ್ಷ ತಾಯೂರು ಪ್ರಕಾಶ್, ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾಯಿಸಂದ್ರ ಮುನಿಯಪ್ಪ, ವಾಲ್ಮೀಕಿ ನಾಯಕ ಯುವ ಸಂಘಟನೆ ರಾಜ್ಯಾಧ್ಯಕ್ಷ ತುಳಸೀರಾಂ, ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಕೆ.ಎಸ್.ಮೃತ್ಯುಂಜಯ, ನಿವೃತ್ತ ಐಎಎಸ್ ಅಧಿಕಾರಿ ಶಿವಪ್ಪ, ನಿವೃತ್ತ ಕಾರಾಗೃಹ ಅಧಿಕಾರಿ ಹರ್ತಿಕೋಟೆ ವೀರೇಂದ್ರ ಸಿಂಹ, ಎಂ.ಲಕ್ಷ್ಮಣ, ವಾಲ್ಮೀಕಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಯಡದೊರೆ ಮಹೇಶ್ ನಾಯಕ್ ಇತರರು ಇದ್ದರು.