ಜಿಲ್ಲೆ

ಮಾಗಳದ ಕಾಮಣ್ಣ ಮೂರ್ತಿಗೆ 150 ವರ್ಷ ಇತಿಹಾಸ

ಹೂವಿನಹಡಗಲಿ: ತಾಲೂಕಿನ ಮಾಗಳ ಗ್ರಾಮದಲ್ಲಿ ಹೋಳಿ ಹುಣ್ಣಿಮೆ ಅಂಗವಾಗಿ ಗ್ರಾಮದ ಜನತೆ ಕಾಮಣ್ಣ ಮತ್ತು ರತಿದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಐದು ದಿನ ವಿವಿಧ ಕಲೆ ಪ್ರದರ್ಶಿಸಿ ಗಮನ ಸೆಳೆದರು.

ಗ್ರಾಮದಲ್ಲಿ 150 ವರ್ಷಗಳಿಂದ ಒಂದೇ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಐದು ದಿನ ಪ್ರತಿಷ್ಠಾಪಿಸಿದ ನಂತರ ಕಾಮಣ್ಣ ಮತ್ತು ರತಿದೇವಿ ಭಾವಚಿತ್ರವನ್ನು ಬೆಂಕಿಯಲ್ಲಿ ಸುಟ್ಟ ನಂತರ, ಅದೇ ಬೆಂಕಿಯಲ್ಲಿ ಬಣ್ಣ ಕಾಯಿಸಿ ಊರಿನ ಜನರಿಗೆ ಹಂಚಲಾಗುತ್ತದೆ. ಕಾಮಣ್ಣನ್ನು ಸುಟ್ಟ ಬೆಂಕಿಯ ಕೆಂಡದಲ್ಲೇ ಮನೆಗಳಲ್ಲಿ ಹೊಲೆ ಹೊತ್ತಿಸಿ ಅಡುಗೆ ಮಾಡುತ್ತಾರೆ. ಇದರಿಂದ ಗ್ರಾಮದಲ್ಲಿ ಕೆಟ್ಟ ಆಲೋಚನೆಗಳು ಕಳೆದು ಹೊಸ ಜೀವನ ಆರಂಭವಾಗಲಿದೆ ಎಂಬ ಪ್ರತೀತಿಯಿದೆ. ಬೆಂಕಿಯಲ್ಲಿ ಸುಡುವ ಕಾಮಣ್ಣ ಚಿತ್ರ ಹಾರಿದ ದಿಕ್ಕಿಗೆ ಮಳೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ತಾಲೂಕಿನ ವಿವಿಧೆಡೆ ಕಾಮಣ್ಣ ಮತ್ತು ರತಿದೇವೆ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಹುಣ್ಣಿಮೆಯ ಮರುದಿನ ಹೋಳಿ ಆಚರಿಸಲಾಗುತ್ತದೆ.