ಜಿಲ್ಲೆ

ಮಾಗಡಿಯಲ್ಲಿ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಆರೋಪಿಗಳು : ಪೊಲೀಸರಿಂದ 10 ಮಂದಿ ವಶಕ್ಕೆ

ರಾಮನಗರ: ಮಾಗಡಿಯಲ್ಲಿ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 10 ಮಂದಿಯಲ್ಲಿ ಪ್ರಮುಖ ಆರೋಪಿಯಾಗಿರುವ ರಂಗೇಗೌಡ ತನ್ನ ಪುತ್ರಿಗೂ ಸಹಾಯ ಮಾಡಿದ್ದಾಗಿ ತನಿಖೆ ವೇಳೆ ಮಾಹಿತಿ ನೀಡಿದ್ದಾನೆ.

ಮಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಾರ್ಥಿಯಾಗಿ ಉತ್ತಮ ಅಂಕಗಳನ್ನು ಪಡೆದಿದ್ದಾಳೆ. ಪರೀೆ ಅಕ್ರಮ ನಡೆದಿರುವ ಕೆಂಪೇಗೌಡ ಶಾಲೆ ಶೇ.100 ಲಿತಾಂಶ ಪಡೆದಿದೆ. ಇದರ ಜತೆಗೆ ಮಾಗಡಿಯ ಇನ್ನೂ ನಾಲ್ಕೂ ಶಾಲೆಗಳು ಉತ್ತಮ ಲಿತಾಂಶ ದಾಖಲಿಸಿದ್ದು, ಅಂಕ ಗಳಿಕೆ ಪ್ರಮಾಣದಲ್ಲಿಯೂ ಸಾಕಷ್ಟು ಏರಿಕೆ ಆಗಿದೆ. ಈ ಬಗ್ಗೆಯೂ ವಿವರಣೆ ನೀಡುವಂತೆ ಪೊಲೀಸರು ಶಿಕ್ಷಣ ಇಲಾಖೆಗೆ ಸೂಚಿಸಿದ್ದಾರೆ.

ಪರೀೆ ಲಿತಾಂಶ ಬಂದ ನಂತರ ಮತ್ತು ಪರೀೆಗಳು ಮುಗಿದು ತಿಂಗಳ ನಂತರ ಪರೀಾ ಅಕ್ರಮ ಬಯಲಿಗೆ ಬಂದಿದ್ದು, ಈ ಸಂಬಂಧ ತನಿಖೆ ನಡೆಸಿರುವ ಪೊಲೀಸರು ಮತ್ತಷ್ಟು ಸತ್ಯಗಳನ್ನು ಬಯಲಿಗೆಳೆಯಲು ಮುಂದಾಗಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಮಾಗಡಿ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಅವರನ್ನು ಮಂಗಳವಾರ ಸಂಜೆ ವಶಕ್ಕೆ ಪಡೆದು ವಿಚಾರ ನಡೆಸಿದ್ದರು. ಈ ವೇಳೆ ರಂಗೇಗೌಡ ನೀಡಿದ ಮಾಹಿತಿ ಆಧಾರದ ಮೇಲೆ ಕೆಂಪೇಗೌಡ ಶಾಲೆಯ ಪ್ರಾಚಾರ್ಯ ಶ್ರೀನಿವಾಸ, ಕೃಷ್ಣಮೂರ್ತಿ, ವಿಷಯ ತಜ್ಞರಾದ ಸುಬ್ರಹ್ಮಣ್ಯ, ಸಮಾಜ ವಿಜ್ಞಾನ ಶಿಕ್ಷಕ ಶ್ರೀನಿವಾಸ್​, ಕನ್ನಡ ಶಿಕ್ಷಕ ಅರ್ಜುನ್​, ಹಿಂದಿ ಶಿಕ್ಷಕ ಅಲೀಂಉಲ್ಲಾ, ಇಂಗ್ಲಿಷ್​ ಶಿಕ್ಷಕ ನಾಗರಾಜು ಎಂಬುವರನ್ನು ಪೊಲೀಸರು ಬುಧವಾರ ವಿಚಾರಣೆಗೆ ಒಳಪಡಿಸಿದ್ದಾರೆ. ಜತೆಗೆ ಬ್ಲಾಕ್​ಮೇಲ್​ ಮಾಡಿದ ಆರೋಪದ ಮೇಲೆ ಶಿಕ್ಷಕ ಲೋಕೇಶ್​ ಹಾಗೂ ವಿಜಯ್​ಕುಮಾರ್​ ಎಂಬ ಸ್ಥಳಿಯ ಪತ್ರಕರ್ತನನ್ನು ವಶಕ್ಕೆ ಪಡೆಯಲಾಗಿದೆ.

ನಡೆದದ್ದು ಹೇಗೆ?: ಮಾಗಡಿಯ ರಂಗನಾಥ ಶಾಲೆಯಲ್ಲಿ ಪರೀಾ ಕೇಂದ್ರ ತೆರೆಯಲಾಗಿತ್ತು. ಇಲ್ಲಿ ಹಿಂದಿ ಶಿಕ್ಷಕ ಕೃಷ್ಣಮೂರ್ತಿ ಪರೀಾ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಪರೀೆ ಆರಂಭಕ್ಕೂ 15 ನಿಮಿಷ ಮುನ್ನ ಮೊಬೈಲ್​ನಲ್ಲಿ ಪ್ರಶ್ನೆಪತ್ರಿಕೆಯ ೋಟೋ ತೆಗೆದು ಅದನ್ನು ಕೆಂಪೇಗೌಡ ಶಾಲೆಯ ಗುಮಾಸ್ತ ರಂಗೇಗೌಡ ಅವರಿಗೆ ರವಾನೆ ಮಾಡುತ್ತಿದ್ದರು. ಇವರು ಆಯಾ ವಿಷಯ ಶಿಕ್ಷಕರನ್ನು ಕೂರಿಸಿಕೊಂಡು ಉತ್ತರ ಸಿದ್ಧಪಡಿಸಿ ಮತ್ತೆ ಪರೀಾ ಕೇಂದ್ರಕ್ಕೆ ರವಾನಿಸುತ್ತಿದ್ದರು. ನಂತರ ಇಡೀ ಪರೀಾ ಕೇಂದ್ರದ ಮಕ್ಕಳಿಗೆ ಹೇಳಿಕೊಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆ.ಸಂತೋಷ್​ ಬಾಬು ಮಾಹಿತಿ ನೀಡಿದರು.

ಎಲ್ಲ ಪ್ರಶ್ನೆಪತ್ರಿಕೆಗಳೂ ಸೋರಿಕೆ ಆಗಿದೆ ಎನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಹೊರ ಬಂದಿದೆ.

ಮಾಗಡಿಯ ಇತರ ಪರೀಾ ಕೇಂದ್ರಗಳಲ್ಲಿಯೂ ಇದೇ ರೀತಿ ಅಕ್ರಮ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಮತ್ತೊಂದೆಡೆ ವಶಕ್ಕೆ ಪಡೆಯಲಾದ ಶಿಕ್ಷಕರು, ವಿದ್ಯಾರ್ಥಿಗಳು ಪರೀೆಯಲ್ಲಿ ಅನುತ್ತೀರ್ಣರಾಗಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಹಣಕ್ಕಾಗಿ ಉತ್ತರ ಹೇಳಿಕೊಡಲಾಗಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಎಸ್​ಪಿ ತಿಳಿಸಿದರು.