ಮೂಡಿಗೆರೆ: ಮಾಕೋನಹಳ್ಳಿ ಗ್ರಾಪಂ ಅಧ್ಯಕ್ಷರಾಗಿ ಎಚ್.ಡಿ.ಪ್ರಸನ್ನ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಾಪಂ ಇಒ ದಯಾವತಿ ಕಾರ್ಯನಿರ್ವಹಿಸಿದರು.
8 ಸದಸ್ಯ ಬಲದ ಗ್ರಾಪಂನಲ್ಲಿ ಹಿಂದೆ ಸಾಮಾನ್ಯವಾಗಿ ವರ್ಗದ ಮೀಸಲಾತಿಗನುಗುಣವಾಗಿ ಕೆ.ವಿ.ಮಂಜುಳಾ ಅಧ್ಯಕ್ಷರಾಗಿದ್ದರು. ಆಂತರಿಕ ಒಪ್ಪಂದದಂತೆ ಮಂಜುಳಾ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಶುಕ್ರವಾರ ಅವಿರೋಧ ಆಯ್ಕೆ ನಡೆಯಿತು.
ಅಭಿನಂದನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಚ್.ಡಿ.ಪ್ರಸನ್ನ ಮಾತನಾಡಿ, ಗ್ರಾಪಂನ 8 ಸದಸ್ಯರ ಪೈಕಿ ನಾನು ಜೆಡಿಎಸ್ ಬೆಂಬಲಿತ ಸದಸ್ಯನಾಗಿದ್ದೇನೆ. ನನ್ನ ಅಧಿಕಾರವಧಿಯಲ್ಲಿ ಗ್ರಾಪಂ ಅನ್ನು ಮಾದರಿಯನ್ನಾಗಿ ಮಾಡುವುದರೊಂದಿಗೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸುವುದಾಗಿ ತಿಳಿಸಿದರು. ಪಕ್ಷಭೇದ ಮರೆತು ಎಲ್ಲ ಸದಸ್ಯರ ವಿಶ್ವಾಸ ಪಡೆದು ಸರ್ಕಾರದದಿಂದ ಹೆಚ್ಚಿನ ಅನುದಾನ ತಂದು ಗ್ರಾಮಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ತಿಳಿಸಿದರು.
ಮಾಜಿ ಅಧಕ್ಷೆ ಕೆ.ವಿ.ಮಂಜುಳಾ, ಉಪಾಧ್ಯಕ್ಷೆ ರಕ್ಷಿತಾ, ಮುಖಂಡರಾದ ಶ್ರೀನಿಧಿ, ಗಬ್ಬಳ್ಳಿ ಚಂದ್ರೇಗೌಡ, ಪ್ರವೀಣ್, ಪೂರ್ಣೇಶ್, ಉದಯ್, ವೆಂಕಟೇಶ್, ನಾಗೇಶ್, ಸುಂದರೇಶ್, ಪಿಡಿಒ ಸುಧೀರ್ ಇತರರಿದ್ದರು.