ಜಿಲ್ಲೆ

ಮಾಕವಳ್ಳಿಯಲ್ಲಿ ಅಂಬೇಡ್ಕರ್ ಸ್ಮರಣೆ

ಕಿಕ್ಕೇರಿ: ತಾಲೂಕಿನ ಮಾಕವಳ್ಳಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಬಳಗದಿಂದ ಸೋಮವಾರ ಆಚರಿಸಲಾಯಿತು.

ಗ್ರಾಮ ಮುಖಂಡ ಸುನಿಲ್ ಸಣ್ಣಯ್ಯ ಮಾತನಾಡಿ, ಅಂಬೇಡ್ಕರ್ ದೇಶದ ಮಹಾನ್ ಶಕ್ತಿ. ಅವರು ಸಂವಿಧಾನ ರಚನೆ ಮಾಡಿದ ಫಲವಾಗಿ ಹಿಂದುಳಿದವರು ಸೇರಿದಂತೆ ಎಲ್ಲ ಸಮಾಜದವರು ಮೀಸಲಾತಿ ಸವಲತ್ತು ಅನುಭವಿಸುವಂತಾಗಿದೆ ಎಂದರು.

ಗ್ರಾಪಂ ಸದಸ್ಯರಾದ ಎಂ.ಆರ್. ಮಂಜೇಗೌಡ, ಲಲಿತಮ್ಮ ಸಣ್ಣಯ್ಯ, ಮುಖಂಡರಾದ ಸುಬ್ಬಯ್ಯ, ಸಚಿನ್, ರಘು, ಚಲುವರಾಜು, ಚಂದನ್, ನಟೇಶ್, ಶ್ರೀನಿವಾಸ, ಉದಯ, ರೋಹಿತ್, ಗೀತಾ, ಸರಳಾ, ರಾಜಮ್ಮ, ಗಾಯಿತ್ರಿ, ಪ್ರೇಮಮ್ಮ, ಭಾಗ್ಯಮ್ಮ ಉಪಸ್ಥಿತರಿದ್ದರು.