ಜಿಲ್ಲೆ

ಮಾ.೧೩ರಂದು ಜಿಲ್ಲೆಗೆ ವಿಜಯ ಸಂಕಲ್ಪಯಾತ್ರೆ

ಬಾಗಲಕೋಟೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಹಾಗೂ ಬರುವ ವಿಧಾನಸಭೆಯ ಚುನಾವಣೆಯಲ್ಲಿ ಮಿಷನ್-ಶೇ.೫೧ ರಷ್ಟು ಮತಗಳಿಕೆಯ ನಿರ್ದಿಷ್ಟ ಗುರಿಯೊಂದಿಗೆ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ರಥಯಾತ್ರೆ ಮಾ.೧೩ ರಂದು ಜಿಲ್ಲೆಗೆ ಪ್ರವೇಶ ಮಾಡಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ಮಾ. ೧೩ ರಂದು ಮಧ್ಯಾಹ್ನ ೨ ಗಂಟೆಗೆ ವಿಜಯಪುರದಿಂದ ಬೀಳಗಿ ಮತಕ್ಷೇತ್ರದ ಮುಖಾಂತರ ಜಿಲ್ಲೆಯನ್ನು ವಿಜಯ ಸಂಕಲ್ಪ ಯಾತ್ರೆ ಪ್ರವೇಶ ಮಾಡಲಿದೆ. ಬೀಳಗಿ ಹಾಗೂ ಗಲಗಲಿಯಲ್ಲಿ ರೋಡಶೋ ನಡೆದು ಜಮಖಂಡಿ ಮತಕ್ಷೇತ್ರಕ್ಕೆ ತೆರಳಲಿದೆ. ಸಂಜೆ ೬ ಗಂಟೆಗೆ ಜಮಖಂಡಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಪೊಲೋ ಮೈದಾನದಲ್ಲಿ ನಡೆಯಲಿದೆ. ಬಹಿರಂಗ ಸಭೆಯನ್ನು ಉದ್ದೇಶಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

೭ ವಿಧಾನಸಭೆ ಮತಕ್ಷೇತ್ರದಲ್ಲಿ ರಥಯಾತ್ರೆಯು ೨೮೬ ಕಿ.ಮೀ. ಸಂಚರಿಸಲಿದೆ. ಮಾ.೧೪ ರಂದು ಬೆಳಗ್ಗೆ ೧೦ ಗಂಟೆಗೆ ರಥವು ತೇರದಾಳ ಮತಕ್ಷೇತ್ರಕ್ಕೆ ಆಗಮಿಸಿ, ತೇರದಾಳ ಮತಕ್ಷೇತ್ರದ ಬನಹಟ್ಟಿಯಿಂದ ಮಹಾಲಿಂಗಪುರದವರೆಗೆ ರೋಡಶೋ , ನಂತರ ಮಧ್ಯಾಹ್ನ ೨ ಗಂಟೆಗೆ ಮುಧೋಳ ಮತಕ್ಷೇತ್ರಕ್ಕೆ ಪ್ರವೇಶಿಸಿ, ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಜಡಗಣ್ಣ, ಬಾಲಣ್ಣ ವೃತ್ತ-ಗಾಂಧಿ ವೃತ್ತ-ಶಿವಾಜಿ ವೃತ್ತ-ರನ್ನ ವೃತ್ತ ಮಾರ್ಗವಾಗಿ ರೋಡ ಶೋ ಲೋಕಾಪುರದವರೆಗೆ ಜರುಗಲಿದೆ ಎಂದರು.

ಮಾ.೧೪ ರಂದು ಸಂಜೆ ೬ ಗಂಟೆಗೆ ಬಾಗಲಕೋಟೆಯ ವಲ್ಲಭಭಾಯಿ ವೃತ್ತದಲ್ಲಿ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ. ಸಭೆಯನ್ನು ಉದ್ದೇಶಿಸಿ ಕೇಂದ್ರ ರಕ್ಷಣಾ ರಾಜ್ಯ ಖಾತೆ ಸಚಿವ ವಿ.ಕೆ.ಸಿಂಣ್ ಭಾಷಣ ಮಾಡಲಿದ್ದಾರೆ. ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾಽತ್ಯ ಸಿಂದಿಯಾ ಸಭೆಯಲ್ಲಿ ಭಾಗವಹಿಸುವರು. ಅಂದು ರಥಯಾತ್ರೆ ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಲಿದೆ. ಮಾ.೧೫ ರಂದು ಬೆಳಗ್ಗೆ ೧೧ ಗಂಟೆಗೆ ಹುನಗುಂದ ಮತಕ್ಷೇತ್ರಕ್ಕೆ ಪ್ರವೇಶಿಸಿ ಹುನಗುಂದದಿಂದ ಇಳಕಲ್ಲ ಮಾರ್ಗವಾಗಿ ಗುಡೂರವರೆಗೆ ರೋಡ್‌ಶೋ ನಡೆಯಲಿದೆ ಅಲ್ಲಿಂದ ಬಾದಾಮಿ ಮತಕ್ಷೇತ್ರಕ್ಕೆ ಪಟ್ಟದಕಲ್ಲಿನ ಮುಖಾಂತರ ಮಧ್ಯಾಹ್ನ ೩ ಗಂಟೆಗೆ ಪ್ರವೇಶ ಮಾಡಲಿದೆ. ಪಟ್ಟದಕಲ್ಲಿನಿಂದ -ಬಾದಾಮಿ ಮಾರ್ಗವಾಗಿ ಬೇಲೂರಿನವರಿಗೆ ರೋಡಶೋ ನಡೆಯಲಿದೆ. ಬೇಲೂರಿನಿಂದ ರೋಣ ಮತಕ್ಷೇತ್ರಕ್ಕೆ ವಿಜಯ ಸಂಕಲ್ಪ ರಥಯಾತ್ರೆಯು ನಿರ್ಗಮಿಸಲಿದೆ ಎಂದು ತಿಳಿಸಿದರು.

ರಥಯಾತ್ರೆಯಲ್ಲಿ ರಾಜ್ಯ ಸಂಚಾಲಕ ಸಿ.ಸಿ.ಪಾಟೀಲ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಗೋವಿಂದ ಕಾರಜೋಳ, ಸಚಿವ ಬೈರತಿ ಬಸವರಾಜ, ಮುರುಗೇಶ ನಿರಾಣಿ, ಶಿವರಾಂ ಹೆಬ್ಬಾರ, ಶಾಸಕ ರಮೇಶ ಜಾರಕಿಹೊಳಿ ಸೇರಿದಂತೆ ಪಕ್ಷದ ಶಾಸಕರು, ವಿ.ಪ.ಸದಸ್ಯರು, ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬೆಳಗಾವಿ ಸಹ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ರಾಜು ಮುದೇನೂರ, ನರೇಂದ್ರ ಕುಪ್ಪಸ್ತ ಇದ್ದರು.