ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಗೌಸ್ ಮೊಯಿದ್ದೀನ್  
ಜಿಲ್ಲೆ

ಮಾ. ೧೧ರಂದು ಬೆಂಗಳೂರು ಚಲೋ

ಚಿಕ್ಕಮಗಳೂರು: ಭೂಮಿಯ ಹಕ್ಕು ಸಾಮಾಜಿಕ ನ್ಯಾಯದ ಪ್ರತಿಪಾದನೆಗಾಗಿ ಮಾ.೧೧ ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಗೌಸ್ ಮೊಯಿದ್ದೀನ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಮಾ. ೧೧ರಂದು ಭೂ ಸತ್ಯಾಗ್ರಹಕ್ಕೆ ಚಾಲನೆ ನೀಡಲಿದ್ದು, ಮಾ. ೧೨ ಮತ್ತು ೧೩ ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿರುವ ಜನಚಳವಳಿಗಳ ಬಜೆಟ್ ಅವೇಶನದಲ್ಲಿ ಭೂ-ಹಕ್ಕಿನ ಪ್ರತಿಪಾದನೆ ನಡೆಯಲಿದೆ ಎಂದು ಹೇಳಿದರು.

ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸಿರುವ ಭೂರಹಿತರಿಗೆಲ್ಲರಿಗೂ ಯಾವುದೇ ಸಬೂಬು ಹೇಳದೆ ಸರ್ಕಾರ ಹಕ್ಕುಪತ್ರ ನೀಡಲೇಬೇಕು. ಬಡವರು ಕಟ್ಟಿಕೊಂಡಿರುವ ಮನೆಗಳಿಗೆ ಸಕ್ರಮ ಮಂಜೂರಾತಿ ನೀಡಬೇಕು. ನೆಲೆ ಇಲ್ಲದ ಪ್ರತಿಯೊಂದು ಕುಟುಂಬಕ್ಕೂ ಸ್ವಂತದ ಸೂರೊಂದನ್ನು ಸರ್ಕಾರ ಕಲ್ಪಿಸಿಕೊಡಬೇಕು. ಅಭಿವೃದ್ಧಿಯ ಹೆಸರಲ್ಲಿ ಬಲವಂತದ ಭೂಸ್ವಾಧೀನ ನಿಲ್ಲಬೇಕು. ಒತ್ತುವರಿ ಹೆಸರಲ್ಲಿ ಯಾವುದೇ ಜಾಗ, ಭೂಮಿಯಿಂದ ಒಕ್ಕಲೆಬ್ಬಿಸಬಾರದು ಒತ್ತಾಯಿಸಿದರು.

ಭೂಮಿಯ ಮೇಲೆ ಬಲಾಢ್ಯರಿಗೆ ಮಾತ್ರವಲ್ಲ ಬಡವರಿಗೂ ಹಕ್ಕಿದೆ. ಮಲೆನಾಡಿನಲ್ಲಿ ಜಾರಿಗೆ ತರುತ್ತಿರುವ ಭೂ-ಗುತ್ತಿಗೆ ರದ್ದುಪಡಿಸಬೇಕು ಹಾಗೂ ಅರಣ್ಯ ಹಕ್ಕು ಕಾಯಿದೆ ಅನ್ವಯ ಭೂ-ಮಂಜೂರಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಭೂ-ವಸತಿ ಹಕ್ಕು ವಂಚಿತರು ಅಂದು ಸರ್ಕಾರಕ್ಕೆ ನೋಟೀಸ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ಮುಖಂಡರಾದ ಕೆ.ಕೆ.ಕೃಷ್ಣೇಗೌಡ, ಬಸವರಾಜು, ಲೋಕೇಶ್, ಎz್ದೆÃಳು ಕರ್ನಾಟಕದ ರೀತು, ಅರುಣಾಕ್ಷಿ, ಲೋಕೇಶ್, ಹುಸೇನ್, ಗಣೇಶ್ ಮತ್ತಿತರರಿದ್ದರು.