ಬಾಗಲಕೋಟೆ ನಗರದ ಪೆಸ್‌ಕ್ಲಬ್‌ನಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಿ.ಬಳ್ಳಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಜಿಲ್ಲೆ

ಮಾ.೧ ರಿಂದ ಸರ್ಕಾರಿ ನೌಕರರ ಮುಷ್ಕರ

ಬಾಗಲಕೋಟೆ: ಏಳನೇ ವೇತನ ಆಯೋಗದ ಮಧ್ಯಂತರ ವರದಿ ತರಿಸಿಕೊಂಡು ವೇತನ ಹೆಚ್ಚಿಸಬೇಕು, ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು ಮಾ.೧ ರಿಂದ ಅನಿಧಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ಜಿಲ್ಲೆಯ ೪೦ ಸಾವಿರಕ್ಕೂ ಕ್ಕೂ ಹೆಚ್ಚು ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬಿ.ಬಳ್ಳಾರಿ ಹೇಳಿದರು.

ಶಿಕ್ಷಕರು, ವಿವಿಧ ಇಲಾಖೆ ನೌಕರರು ೨೬ ಸಾವಿರ, ಸಾರಿಗೆ ಇಲಾಖೆ, ಕೆಪಿಟಿಸಿಎಲ್, ಹೆಸ್ಕಾಂ ಇನ್ನಿತರ ನೌಕರರರು ಸೇರಿ ಒಟ್ಟು ೪೦ ಸಾವಿರ ನೌಕರರು ಜಿಲ್ಲೆಯಲ್ಲಿದ್ದು, ಅವರೆಲ್ಲರು ಭಾಗವಹಿಸಲಿದ್ದಾರೆ. ಆಸ್ಪತ್ರೆಗಳಲ್ಲಿ ತುರ್ತು ಸೇವೆ ಮಾತ್ರ ಲಭ್ಯವಿರಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಮುಷ್ಕರವನ್ನು ನಡೆಸಲಿದ್ದೇವೆ. ಯಾರ ವಿರುದ್ಧವು ಘೋಷಣೆ ಕೂಗುವದಿಲ್ಲ. ಪ್ರತಿಭಟನೆ ನಡೆಸುವುದಿಲ್ಲ. ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೆ ಒಳಪಡುವ ನೌಕರರಿಗೆ ೨೦೨೨ ಜು.೧ ರಿಂದ ಪರಿಷ್ಕೃತ ವೇತನ ಭತ್ಯೆಗಳಿಗೆ ಅರ್ಹರಾಗಿದ್ದು, ೬ನೇ ವೇತನ ಆಯೋಗದ ಮಾದರಿಯಂತೆ ೭ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರ ದಿಯನ್ನು ಪಡೆಯಬೇಕು. ಶೇ.೪೦ ರಷ್ಟು ವೇತನ ಹೆಚ್ಚಳ ಸೌಲಭ್ಯವನ್ನು ಒದಗಿಸಬೇಕು. ಪಂಜಾಬ, ರಾಜಸ್ಥಾನ, ಛತ್ತೀಸಗಡ್, ಜಾರ್ಖಂಡ, ಹಿಮಾಚಲ ಪ್ರದೇಶಗಳ ರಾಜ್ಯಗಳ ಮಾದರಿಯಲ್ಲಿ ಎನ್‌ಪಿಎಸ್ ರದ್ದು ಪಡಿಸಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.

ಸಂಘದ ಪದಾಽಕಾರಿಗಳಾದ ಸುರೇಶ ಇಂಜಗನೇರಿ, ಎಸ್.ಕೆ.ಹಿರೇಮಠ, ಸಂಜೀವ ಸತರೆಡ್ಡಿ, ವಿಠ್ಠಲ ವಾಲಿಕಾರ, ಕೆ.ಎಸ್.ದೇಸಾಯಿ, ಯೋಗಾನಂದ ಕಿರಸೂರ ಉಪಸ್ಥಿತರಿದ್ದರು.