ಹಾಸನ: ಹಾಸನದ ರಂಗಸಿರಿ ಕಲಾವಿದರಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಮಾ.24ರಿಂದ ನಾಲ್ಕು ದಿನಗಳ ಕಾಲ ಕಾಲೇಜು ರಂಗೋತ್ಸವ ಕಾರ್ಯಕ್ರಮವನ್ನು ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಸಿರಿ ತಂಡದ ಕಾರ್ಯದರ್ಶಿ ಪಿ.ಶಾಡ್ರಾಕ್ ತಿಳಿಸಿದರು.
ದಿ.ವಿ.ಸತೀಶ್, ದಿ. ಎಚ್.ಡಿ. ಗುರುಪ್ರಸಾದ್, ದಿ. ಶ್ರೀನಿವಾಸ ಕೊಟ್ಟೂರು ಹಾಗೂ ದಿ. ಹನುಮಂತ ನಾಯಕ ಇವರ ನೆನಪಿನಲ್ಲಿ ಈ ನಾಟಕೋತ್ಸವ ಆಯೋಜಿಸಲಾಗಿದೆ. ನಗರದ ಐದು ಕಾಲೇಜು ವಿದ್ಯಾರ್ಥಿಗಳಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಅವರಿಂದ ನಾಟಕವನ್ನು ಅಭಿನಯ ಮಾಡಿಸಲಾಗುತ್ತಿದೆ. ಪ್ರತಿದಿನ ಸಂಜೆ 6 ಗಂಟೆಗೆ ಉಚಿತವಾಗಿ ನಗರದ ಹಾಸನಾಂಬ ಕ್ಷೇತ್ರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ನಗರದ ಮಹಿಳಾ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಕಮ್ಮನ ಸಾಲು ನಾಟಕ, ಕಲಾ ಕಾಲೇಜು ವಿದ್ಯಾರ್ಥಿಗಳಿಂದ ಸುಣ್ಣದ ಸುತ್ತು ನವ್‌ಕಿಸ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ವಿಗಡ ವಿಕ್ರಮರಾಯ, ಜ್ಞಾನಧಾರೆ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಶರೀಫ್, ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ ಭಗವದ್ದಜ್ಜುಕೀಯಂ, ರಂಗಸಿರಿ ಬಳಗದ ವತಿಯಿಂದ ನನ್ನ ತಂಗಿಗೊಂದು ಗಂಡು ಕೊಡಿ ಎಂಬ ನಾಟಕವನ್ನು ಅಭಿನಯಿಸಲಾಗುತ್ತಿದೆ ಎಂದು ಹೇಳಿದರು.
ರಂಗಸರಿ ತಂಡ ಎಂದರೆ ಒಂದು ಉತ್ತಮವಾದಂತಹ ತಂಡವಾಗಿತ್ತು. ಇದರಲ್ಲಿ ಹಲವು ಹಿರಿಯ ಕಲಾವಿದರು ಮತ್ತು ಕಲಾಸಕ್ತರು ಸೇರಿ ಸ್ಥಾಪನೆ ಮಾಡಲಾಗಿತ್ತು. ಈ ತಂಡದಲ್ಲಿ ನಾಲ್ವರು ನಿಧನರಾಗಿದ್ದು ಅವರ ಸವಿ ನೆನಪಿಗಾಗಿ ಕಾಲೇಜು ರಂಗೋತ್ಸವ ಕಾರ್ಯಕ್ರಮದಲ್ಲಿ ನಗರದ ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು
ಸುದ್ದಿಗೋಷ್ಠಿಯಲ್ಲಿ ಅನಿಲ್ ರೇವೂರ್, ಬಿ.ಆರ್. ಉದಯ್ ಕುಮಾರ್, ಮಲ್ಲೇಶ್, ಜವರಯ್ಯ ಹಾಜರಿದ್ದರು.