ಹಾಸನ: ಶ್ರೀ ಮಾರುತಿ ಕಲಾಸಂಘದ ವತಿಂಯಿಂದ ನಗರದ ವಿಜಯನಗರ ಬಡಾವಣೆಯ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಹೋಳಿ ಹಬ್ಬದ ಪ್ರಯುಕ್ತ ಮಾ.23 ರಂದು ಶನಿವಾರ ಸಂಜೆ 6 ಗಂಟೆಗೆ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಆಯೋಜಿಸಲಾಗಿದೆ. ಎಂದು ನಿವೃತ್ತ ಎಎಸ್‌ಐ. ಟಿ.ವಿ. ನಾಗರಾಜು ತಿಳಿಸಿದರು.
ವಿಜಯನಗರ ಬಡಾವಣೆಯ ಆದಾಯ ತೆರಿಗೆ ಇಲಾಖೆ ಸಮೀಪ ಮಾ.23 ಸಂಜೆ 6 ಗಂಟೆಗೆ ಭವ್ಯವಾದ ವೇದಿಕೆಯಲ್ಲಿ ಈ ನಾಟಕವನ್ನು ಅಭಿನಯಿಸುತ್ತಿದ್ದು ಹೆಚ್ಚಿನ ಜನರು ಆಗಮಿಸಿ ಈ ನಾಟಕವನ್ನು ಯಶಸ್ಸಿಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು
ಪೌರಾಣಿಕ ನಾಟಕಗಳು ನಶಿಸುತ್ತಿರುವ ಸಂದರ್ಭದಲ್ಲಿ ಎಂ.ಸಿ. ಶ್ರೀನಿವಾಸ್ ಮತ್ತು ಟಿ.ವಿ. ನಾಗರಾಜು ಅವರ ನೇತೃತ್ವದಲ್ಲಿ ಮತ್ತು ಕೆ. ರಮೇಶ್ ಕೋಡಿರಂಗಸ್ವಾಮಿ, ಎಚ್.ವಿ. ಕೃಷ್ಣ ಮತ್ತು ಇತರೆ ಕಲಾವಿದರ ಸಾರಥ್ಯದಲಿ ನಾವೆಲ್ಲ ಕಲಾವಿದರು ಅದನ್ನು ಉಳಿಸುವ ನಿಟ್ಟಿನಲ್ಲಿ ಈಗಾಗಲೇ ತರಬೇತಿಯನ್ನ ಪಡೆದುಕೊಂಡು ಪೌರಾಣಿಕ ನಾಟಕವನ್ನು ಅಭಿನಯಿಸುತಿದ್ದೇವೆ. ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಹಾಯಧನ ಸಿಗುತ್ತಿತ್ತು ಆದರೆ ಈಗ ಯಾವುದೇ ಸಹಾಯಧನವಿಲ್ಲ ಸಾರ್ವಜನಿಕರು ಮತ್ತು ದಾನಿಗಳ ಸಹಾಯದಿಂದ ಈ ನಾಟಕವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ 106 ವರ್ಷದ ಶತಾಯುಷಿ ತ್ಯಾಗಟೂರು ನಂಜಮ್ಮರವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆಯನ್ನು ವಿಜಯನಗರದ ಕೃಷ್ಣಕುಮಾರ್ ವಹಿಸಲಿದ್ದಾರೆ. ಎಂ.ಸಿ. ರಾಜು ಡಿ.ಎಂ. ಹಳ್ಳಿ ಇವರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು. ನಿವಾಸಿಗಳಾದ ನಾರಾಯಣಗೌಡ, ಗಿಡ್ಡೇಗೌಡ, ತಿಮ್ಮೇಗೌಡ, ಚಂದ್ರೇಗೌಡ ಇತರರು ಪಾಲ್ಗೊಳ್ಳಲ್ಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅರ್ಚಕ ರವಿಕಾಂತ್, ನಿವೃತ್ತ ಎ.ಎಸ್.ಐ. ಕೆ.ರಮೇಶ್, ಗ್ರಾಪಂ ಮಾಜಿ ಸದಸ್ಯ ಎಂ.ಸಿ. ಶ್ರೀನಿವಾಸ್, ರವಿಕುಮಾರ್ ಇತರರು ಇದ್ದರು.