ಜಿಲ್ಲೆ

ಮಾ.20ರಂದು ಅರಕಲಗೂಡಿನಲ್ಲಿ ಬಿಜೆಪಿ ಎಸ್ಸಿ-ಎಸ್ಟಿ ಜನಾಂಗದ ಸಮಾವೇಶ

ಹಾಸನ : ಬಿಜೆಪಿ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದ ಸಮಾವೇಶವನ್ನು ಮಾ.20ರಂದು ಅರಕಲಗೂಡಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಎಸ್.ಡಿ ಚಂದ್ರು ಹೇಳಿದರು.

ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಮನದಟ್ಟು ಮಾಡಿ ಮತ್ತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಸನ ಕ್ಷೇತ್ರದಲ್ಲಿಯೂ ಅಂಬೇಡ್ಕರ್ ನಗರ, ಮೋಚಿ ಕಾಲೊನಿ, ಶ್ರೀನಗರ, ಚಿಪ್ಪಿನ ಕಟ್ಟೆ, ಪೆನ್‌ಷನ ಮೊಹಲ್ಲಾ, ರಾಜ್ ಕುಮಾರ್ ನಗರ ಸೇರಿದಂತೆ ಅನೇಕ ಕಡೆ ಇರುವ ಸ್ಲಂ ಗಳ ಅಭಿವೃದ್ಧಿಗೆ ಸರ್ಕಾರ ಶ್ರಮ ವಹಿಸಿದ್ದು ಹಕ್ಕು ಪತ್ರ ಇಲ್ಲದವರಿಗೆ ಹಕ್ಕು ಪತ್ರ ನೀಡುವ ಕೆಲಸವನ್ನು ಶಾಸಕ ಪ್ರೀತಂ ಗೌಡ ಮಾಡಿದ್ದಾರೆ. ಜಿಲ್ಲೆಯಾದ್ಯಂತ ಇರುವ ಎಸ್ಸಿ, ಎಸ್ಟಿ ಸಮುದಾಯದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಪರ ಕೆಲಸಗಳನ್ನು ಮಾಡಲು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಪರ್ವತಯ್ಯ, ಹರೀಶ್, ಅತ್ನಿ ಶಿವರಾಜ್, ಮಧು ಕುಮಾರ್ ಇತರರು ಇದ್ದರು.