ಜಿಲ್ಲೆ

ಮಾ.2, 3ರಂದು ನಾಟಕ ಪ್ರದರ್ಶನ

ಹಾಸನ: ಸಮಾಜಮುಖಿ ರಂಗಬಳಗ ಹಾಗು ಮೈಸೂರಿನ ನಿರಂತರ ತಂಡದ ವತಿಯಿಂದ ಮಾ. 2 ಹಾಗೂ 3ನೇ ತಾರೀಖು ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಹಾಡ್ಲಹಳ್ಳಿ ಪಬ್ಲಿಕೇಶನ್ ಪ್ರಕಾಶಕ ಎಚ್.ಎನ್. ಪ್ರಸನ್ನಕುಮಾರ್ (ಚಲಂ ಹಾಡ್ಲಹಳ್ಳಿ) ತಿಳಿಸಿದರು.
ಜಯರಾಂ ರಾಯಪುರ ಅವರಿಂದ ರಚಿಲ್ಪಟ್ಟ ಈ ಎರಡು ನಾಟಕಗಳನ್ನು ರಂಗಪ್ರದರ್ಶನ ಮಾಡಲಾಗುವುದು. ಮೊದಲ ದಿನ ದೆಹಲಿಯ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಶಹಜಹಾನ್ ಮೂಲಕ ಆರಂಭವಾಗಿ ಅವರ ನಾಲ್ಕು ಮಕ್ಕಳ ಸಂಘರ್ಷದೊಂದಿಗೆ ಅಂತ್ಯವಾಗಲಿದೆ. ಮಾ.3ರ ಭಾನುವಾರ ಚಾವುಂಡರಾಯ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 6.30ಕ್ಕೆ ಕಲಾಭವನದಲ್ಲಿ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇಂತಹ ಮಹತ್ವದ ಎರಡು ನಾಟಕಗಳನ್ನು ಮೈಸೂರು ಹಾಗು ಬೆಂಗಳೂರಿನ ಎರಡು ಪ್ರಮುಖ ರಂಗತಂಡಗಳು ಪ್ರದರ್ಶನ ನೀಡುತ್ತಿವೆ. ಹಾಸನದ ರಂಗಸಿರಿ, ಉಲಿವಾಲ ಸ್ಕೂಲ್ ಆಫ್ ಡ್ರಾಮಾ, ಕಲಾಸಿರಿ, ಅನಿಕೇತನ, ರಂಗಹೃದಯ ಸೇರಿದಂತೆ ಹಾಸನದ ಎಲ್ಲಾ ರಂಗತಂಡಗಳು ಸಹಕಾರ ನೀಡುತ್ತಿವೆ. ಜತೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ಸಹಕಾರ ನೀಡುತ್ತಿದೆ. ರಂಗಾಸಕ್ತರು, ಚರಿತ್ರೆಯ ವಿಧ್ಯಾರ್ಥಿಗಳು ಸಾರ್ವಜನಿಕರು ಇದೇ ಶನಿವಾರ ಹಾಗೂ ಭಾನುವಾರ ಸಂಜೆ ಹಾಸನದ ಕಲಾಭವನದಲ್ಲಿ ಬಂದು ನಾಟಕ ನೋಡಿ ಯಶಸ್ವಿಗೆ ಕಾರಣೀಭೂತರಾಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರಂಗಸಿರಿಯ ಷಾಡ್ರಾಕ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಭಾರತೀಶ್, ಕಟ್ಟೆ ಬೆಳಗುಲಿ ಕುಮಾರ್ ಇತರರು ಉಪಸ್ಥಿತರಿದ್ದರು.