ಚಾಮರಾಜನಗರ: ತಾಲೂಕಿನ ಸಂತೇಮರಹಳ್ಳಿ ಹೋಬಳಿ ಕೇಂದ್ರ ಸ್ಥಾನಕ್ಕೆ ಮೂಲ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸುವ ಸಂಬಂಧ ಮಾ.15ರಂದು ಸಂತೇಮರಹಳ್ಳಿ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಪಡೆದುಕೊಳ್ಳಲು ಸಭೆ ಕರೆಯಲಾಗಿದೆ ಎಂದು ವಿದ್ಯಾವಂತರ ನಿರುದ್ಯೋಗ ಸಂಘದ ರಾಜ್ಯಧ್ಯಕ್ಷ ಕೂಡ್ಲೂರು ಶ್ರೀಧರ್‌ಮೂರ್ತಿ ತಿಳಿಸಿದ್ದಾರೆ.
ಸಂತೇಮರಹಳ್ಳಿ ವಿಧಾನಸಭೆ ಕ್ಷೇತ್ರವಾಗಿದು. ಎಸ್ಸಿ ಮೀಸಲು ಕ್ಷೇತ್ರವಾಗಿದು. ಸಂತೇಮರಹಳ್ಳಿ ಹೋಬಳಿ ಕೇಂದ್ರದಲ್ಲಿ ಮೂಲ ಸೌಲಭ್ಯವಿಲ್ಲದೆ ಸಾರ್ವಜನಿಕರು ತೊಂದರೆ ಪಡುವಂತಾಗಿದೆ. ಸುಜಜ್ಜಿತ ಆಸ್ಪತ್ರೆ, ಕಾಲೇಜು, ಸಾರಿಗೆ ಬಸ್ ನಿಲ್ದಾಣವಿಲ್ಲದೆ ಸಾರ್ವಜನಿಕರು ಮಳೆ ಬಿದ್ದ ವೇಳೆಯಲ್ಲಿ ಬಿಸಿಲಿನ ತಾಪಕ್ಕಾಗಿ ಅಂಗಡಿ ಬಳಿ ತೆರಳುವಂತಾಗಿದೆ. ಸಂತೇಮರಹಳ್ಳಿ ಹೋಬಳಿ ಕೇಂದ್ರ ಸ್ಥಾನದಲ್ಲಿ ಒಂದೇ ಬ್ಯಾಂಕ್ ಇರುವ ಪರಿಣಾಮದಿಂದ ಸುತ್ತಮುತ್ತಲ ಗ್ರಾಮಗಳಲ್ಲಿರುವ ಸಾರ್ವಜನಿಕರು ಖಾತೆ ಹಾಗೂ ಹಣದ ವಹಿವಾಟು ನಡೆಸಲು ತೊಂದರೆ ಪಡುವ ಸ್ಥಿತಿಯಾಗಿದೆ ಎಂದಿದ್ದಾರೆ.
ಸಂತೇಮರಹಳ್ಳಿ ಸಮೀಪದ ಬಸವಟ್ಟಿ, ಕಾವುದವಾಡಿ, ಕಮರವಾಡಿ ಗ್ರಾಮದ ಬಳಿ ಹಲವಾರೂ ವರ್ಷಗಳ ಹಿಂದೆ ಕಬಿನಿ ನಾಲೆ ಸಂಪರ್ಕ ಹೊಂದಿದು. ಆ ಗ್ರಾಮಗಳ ರೈತರ ಜಮೀನಿಗೆ ಕಬಿನಿ ನಾಲೆ ನೀರಿನ ಸಂಪರ್ಕವಿಲ್ಲದಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮಹರಿಸಿ ಸಮಸ್ಯೆಗಳನ್ನು ಬಗೆಹರಿಸಲು ಕಾಲಾವಕಾಶ ನೀಡಲಾಗುತ್ತದೆ ವಿಳಂಬ ಮಾಡಿದಲ್ಲಿ ಸಂತೇಮಹಳ್ಳಿ ಹೋಬಳಿ ರೈತರು ರಸ್ತೆ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದರು.