ಚಾಮರಾಜನಗರ : ಕರ್ನಾಟಕ ರಾಜ್ಯ ವಿದ್ಯಾವಂತ ನಿರುದ್ಯೋಗಿಗಳ ಸಂಘ ಹಾಗೂ ಯಳಂದೂರು ತಾಲೂಕಿನ ಸಮಾನ ಮನಸ್ಕರ ವೇದಿಕೆ ವತಿಯಿಂದ ಮಾ.1 ಮತ್ತು 2ರಂದು ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ ತಿಳಿಸಿದರು.
ಯಳಂದೂರು ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಗೆಲುವು ಸಾಧಿಸುವ ತಂಡಗಳಿಗೆ ಪ್ರಥಮ ಬಹುಮಾನವಾಗಿ 50,000 ರೂ,. ದ್ವಿತೀಯ 30,000 ರೂ. ಹಾಗೂ ತೃತೀಯ 20,000 ರೂ.ನಗದು ಮತ್ತು ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಭಾಗವಹಿಸಲು ಆಸಕ್ತಿ ಇರುವ ತಂಡಗಳು ೆ.20ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿವಿಧ ಜಿಲ್ಲೆಗಳಿಂದ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಯಳಂದೂರಿನಲ್ಲಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ನೋಂದಣಿ ಆಗುವ ತಂಡಗಳಿಗೆ 800 ರೂ. ನಿಗದಿಪಡಿಸಲಾಗಿದೆ. ನೋಂದಣಿ ಮಾಡಿಕೊಳ್ಳವವರು ಯಳಂದೂರಿನ ವಿಜಯ ಮೆಡಿಕಲ್ಸ್ (80733411902-9480094484) ಅನ್ನು ಸಂಪರ್ಕಿಸುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಯರಿಯೂರು ಶ್ರೀನಿವಾಸ್, ಮದ್ದೂರು ಚಿನ್ನಸ್ವಾಮಿ, ಅಂಬಳೆ ಪಿ.ಚಂದ್ರಶೇಖರ್, ಶ್ರೀನಾಥ್ ಹಾಜರಿದ್ದರು.