ಸೋಮವಾರಪೇಟೆ: ಇಲ್ಲಿನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾಗಿ ಮಹೇಶ್ ತಿಮ್ಮಯ್ಯ ಹಾಗೂ ಉಪಾಧ್ಯಕ್ಷರಾಗಿ ಬಿ.ಶಿವಪ್ಪ ಆಯ್ಕೆಯಾದರು.
ಬ್ಯಾಂಕ್ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ನಿರ್ದೇಶಕರಾದ ಎಚ್.ಕೆ.ಮಾದಪ್ಪ, ರಾಘವ, ಶ್ರೀಕಾಂತ್, ಕೆ.ಬಿ.ಸುರೇಶ್, ವೆಂಕಪ್ಪ, ದರ್ಶನ್, ಶೋಭಿತಾ, ರೂಪಾ ಮತ್ತಿತರರು ಇದ್ದರು.