ಚಂದ್ರಗುತ್ತಿ ರೇಣುಕಾಂಬ ಕಲ್ಯಾಣ ಮಂಟಪದ ಆವರಣದಲ್ಲಿ ಮಹಿಷ ಮರ್ದಿನಿ ಯಕ್ಷಗಾನ ಪ್ರಸಂಗದ ದೃಶ್ಯ. 
ಜಿಲ್ಲೆ

ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನ

ಸೊರಬ: ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರ್ಮಿಕ ಮತ್ತು ದತ್ತಿ ಇಲಾಖೆ, ತಾಲೂಕು ಆಡಳಿತ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನದಿಂದ ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶನಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಗಾನ ಕೋಗಿಲೆ ರಾಘವೇಂದ್ರ ಆಚಾರ್ಯ ಜನ್ಸಾಲೆ, ಮಧುಕರ ಹೆಗ್ಡೆ ಮಡಾಮಕ್ಕಿ, ಮದ್ದಳೆಯಲ್ಲಿ ಶಶಾಂಕ್ ಆಚಾರ್ಯ, ಕಿರಿ ಮಂಜೇಶ್ವರ, ಚಂಡೆ ಪ್ರಜ್ವಲ್ ಮುಂಡಾಡಿ, ಮಹಿಷಾಸುರನ ಪಾತ್ರದಲ್ಲಿ ರಾಘವೇಂದ್ರ ಪೇತ್ರಿ, ಮುಮ್ಮೇಳದಲ್ಲಿ ವಿಶ್ವನಾಥ ಆಚಾರ್ಯ ತೊಂಬಟ್ಟು, ಉದಯ್ ಹೆಗಡೆ ಕಡಬಾಳ, ಮಾಗೋಡು ಅಣ್ಣಪ್ಪ, ಕಾರ್ತಿಕ್ ಕಣ್ಣಿಮನೆ, ಕೆ.ಜಿ ಕಾರ್ತಿಕ್, ಭಾಸ್ಕರ್ ಮರಾಠೆ, ಸ್ತ್ರೀ ಪಾತ್ರದಲ್ಲಿ ಸುೀರ್ ಉಪ್ಪೂರು, ಸಂತೋಷ ಹೆಂಗವಳ್ಳಿ, ಪುರುಷೋತ್ತಮ್ ಸಾಗರ, ಹಾಸ್ಯ ಪಾತ್ರದಲ್ಲಿ ರವೀಂದ್ರ ದೇವಾಡಿಗ ಕಮಲಶಿಲೆ, ಪುರಂದರ ಮೂಡ್ಕಣಿ ಇವರು ಮಹಿಷ ಮರ್ದಿನಿ ಯಕ್ಷಗಾನ ಪ್ರದರ್ಶಿಸಿದರು.

ಸಭಾ ಕಾರ್ಯಕ್ರಮವನ್ನು ಪಿಎಸಿಎಸ್ ಅಧ್ಯಕ್ಷ ಮಂಜುನಾಥ ಶಣೈ ಉದ್ಘಾಟಿಸಿದರು. ರೇಣುಕಾಂಬಾ ದೇವಿ ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ, ಪ್ರಮುಖರಾದ ಎನ್.ಗುತ್ಯಪ್ಪ, ಪರಸಪ್ಪ ಓಲೇಕರ್, ಎಸ್.ಡಿ ನಾಯ್ಕ, ಹರ್ಷ, ಗಣೇಶ್ ಮರಡಿ, ಪರಶುರಾಮ ಬರದವಳ್ಳಿ, ರವಿ ಚನ್ನಪಟ್ಟಣ, ಸುರೇಶ್, ಶಕುಂತಲಾ ಪಿ. ಶೇಟ್, ಚೇತನ ಶೇಟ್, ಉಷಾ, ಶಶಿಧರ, ರಾಘು ಇತರರಿದ್ದರು.