ಜಿಲ್ಲೆ

ಮಹಿಳೆಯರೂ ಮುಖ್ಯವಾಹಿನಿಗೆ ಬರಲಿ

ಗೋಕಾಕ: ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗಾಗಿ ರ ಸಂಜೀವಿನಿ ಯೋಜನೆ ಜಾರಿಗೊಳಿಸಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ಅಧ್ಯ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಸ್ವಗೃಹ ಕಚೇರಿಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂದಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಲಾನುಭವಿಗಳಿಗೆ ಒಟ್ಟು 14.38 ಲ ರೂ.ಮೊತ್ತದ ಚೆಕ್​ವಿತರಿಸಿ ಮಾತನಾಡಿದರು. ಮಹಿಳಾ ಸಮುದಾಯವೂ ಮುಖ್ಯವಾಹಿನಿಗೆ ಬರಬೇಕು. ಆರ್ಥಿಕವಾಗಿ ಸಬಲರನ್ನಾಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಈ ಯೋಜನೆ ರೂಪಿಸಿದೆ ಎಂದರು.

ಒಕ್ಕೂಟಕ್ಕೆ ಹಾಲು ಪೂರೈಸುತ್ತಿರುವವರಿಗೆ 20 ದಿನಗಳಲ್ಲಿ ಬಿಲ್​ ಸಂದಾಯ ಮಾಡುತ್ತಿದ್ದೇವೆ. ಸೆಪ್ಟೆಂಬರ್​ ತಿಂಗಳಲ್ಲಿ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯು ನಡೆಯಲಿದ್ದು, ಹಾಲು ಪೂರೈಸುವ ರೈತರಿಗೆ ಹೊಸ ಕೊಡುಗೆ ನೀಡುವ ಸಂಬಂಧ ಚರ್ಚಿಸಲಾಗುತ್ತಿದೆ ಎಂದರು.
ಅಧ್ಯಕ್ಷರು ರೈತ ಕಲ್ಯಾಣ ಸಂದ ವತಿಯಿಂದ ಪ್ರತಿ ಲಾನುಭವಿಗೆ 20 ಸಾವಿರ ರೂ.ನಂತೆ 17 ಜನರಿಗೆ 3.40 ಲ ರೂ., ರಾಸು ವಿಮೆ ಯೋಜನೆಯಡಿ 50 ಸಾವಿರ ರೂ.ನಂತೆ 9 ರೈತರಿಗೆ 4.48 ಲ ರೂ.ಹಾಗೂ ರ ಸಂಜೀವಿನಿ 4ರ ಹಂತದಲ್ಲಿ ನಾಗನೂರು ಬೆಳಗಲಿ ಮಹಿಳಾ ಹಾಲು ಉತ್ಪಾದಕರ ಸಂಕ್ಕೆ ರಾಸು ಖರೀದಿಗಾಗಿ 6.50 ಲ ರೂ.ಮೊತ್ತದ ಚೆಕ್​ ವಿತರಿಸಿದರು.

ಜಿಲ್ಲಾ ಹಾಲು ಉತ್ಪಾದಕರ ಸಂಗಳ ಒಕ್ಕೂಟದ ನಿರ್ದೇಶಕರಾದ ಮಲ್ಲಪ್ಪ ಪಾಟೀಲ, ಸವಿತಾ ಖಾನಪ್ಪಗೋಳ, ಗೋಕಾಕ ಉಪ ವ್ಯವಸ್ಥಾಪಕ ಡಾ.ವೀರಣ್ಣ ಕೌಜಲಗಿ, ವಿಸ್ತರಣಾಧಿಕಾರಿ ಮುಸ್ತಾಕ್​ ನದ್​ಾ, ಗೋಪಾಲ ಭಂಡಾರಿ, ಪಾಂಡು ನಂದಿ, ರ ಸಂಜೀವಿನಿ ಅಧಿಕಾರಿ ಮಲಪ್ರಭಾ ಗಾಣಗಿ ಇತರರಿದ್ದರು.