ಬೈಲಹೊಂಗಲ: ಮಹಿಳೆಯರು ಸ್ವಾವಲಂಬಿಗಳಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಧಾರವಾಡ ಕಚೇರಿಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲಾ ಹೇಳಿದರು. ತಾಲೂಕಿನ ಅನಿಗೋಳ ವಲಯದ ವಕ್ಕುಂದ ಅಕ್ಕಮಹಾದೇವಿ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಪಂ ಅಧ್ಯ ಸಂಗಣ್ಣ ಭದ್ರಶೆಟ್ಟಿ ಅಧ್ಯತೆ ವಹಿಸಿದ್ದರು. ಜಾನಪದ ಕಲಾವಿದ ಸಿ.ಕೆ.ಮೆಕ್ಕೇದ, ಪಿಡಿಒ ವಿಜಯಲ್ಮ ಅನಿಗೋಳ, ತಾಲೂಕು ಯೋಜನಾಧಿಕಾರಿ ವಿಜಯಕುಮಾರ, ಬಸನಗೌಡ ಪಾಟೀಲ ಇತರರಿದ್ದರು.