ಕಬ್ಬೂರ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನದ ಅನುಭವ ಮಂಟಪದಲ್ಲಿ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವರಮಹಾಲಕ್ಷಿ$್ಮ ಪೂಜೆ ಹಾಗೂ ಧಾರ್ಮಿಕ ಸಭಾ ಕಾಯಕ್ರಮವನ್ನು ಕಬ್ಬೂರು ಗೌರಿಶಂಕರ ಮಠದ ಪೀಠಾಧ್ಯ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಹಾಗೂ ಯೋಜನಾಧಿಕಾರಿ ನಾಮದೇವ ದೇಶಪಾಂಡೆ ಚಾಲನೆ ನೀಡಿದರು.
ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಂಗಳು ಸಹಾಯವಾಗುತ್ತವೆ. ಧರ್ಮಸ್ಥಳ ಸಂದ ಸಾಲ ಪಡೆದು ಮಹಿಳೆಯರು ಅಭಿವೃದ್ಧಿ ಹೊಂದಬೇಕು ಎಂದರು.
ಸಂದ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸುಜ್ಞಾನ ಸಿರಿಯಡಿ 52 ಸಾವಿರ ರೂ. ಸಹಾಯಧನ, ವಿಜಯನಗರ ಗ್ರಾಮದ ಕನಕಭವನ ನಿಮಾರ್ಣಕ್ಕೆ 1 ಲ ರೂ. ದೇಣಿಗೆ ಸಂದ ವತಿಯಿಂದ ನೀಡಲಾಯಿತು. ರಮೇಶ ಬೆಲ್ಲದ, ಶಿವರಾಯಿ ಪೂಜೇರಿ, ಶಿವಪ್ಪ ಹುದ್ದಾರ, ಚಂದ್ರಕಾಂತ ಗುರುಪಾದಪ್ಪಗೋಳ, ಭಾರತಿ ಹಂಜಿ, ಸುಮಿತ್ರಾ ಬಾಗಿ, ಮೇಲ್ವಿಚಾರಕ ಮಹಾಂತೇಶ ಗೌರಿಮಠ, ರಾಮಪ್ಪ ಕುಕನೂರ, ಮಹಾದೇವ ಪ್ರಧಾನಿ ಇತರರಿದ್ದರು.