ಚಿಕ್ಕಮಗಳೂರು: ಮಹಿಳೆಯರು ಹೆಚ್ಚು ಕ್ರಿಯಾಶೀಲರಾಗಿರಲು ಪ್ರತಿನಿತ್ಯ ಕ್ರೀಡಾಭ್ಯಾಸ ಮಾಡಬೇಕು ಎಂದು ಅಂತರಾಷ್ಟಿçÃಯ ಕ್ರೀಡಾಪಟು ದ್ವೆÊತ.ಪಿ.ಚಂದ್ರು ತಿಳಿಸಿದರು.
ನಗರದ ಜೆವಿಎಸ್ ಶಾಲಾ ಆವರಣದಲ್ಲಿ ಒಕ್ಕಲಿಗರ ಮಹಿಳಾ ಸಂಘದಿAದ ಅಂತರಾಷ್ಟಿçÃಯ ಮಹಿಳಾ ದಿನಾಚಾರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಗೆ ಬಂದಿರುವುದು ತವರು ಮನೆಗೆ ಬಂದಷ್ಟು ಖುಷಿಯನ್ನು ತಂದಿದೆ. ನನ್ನ ಸಾಧನೆಗೆ ಬೆಂಬಲವಾಗಿ ಪೋಷಕರು ನಿಂತಿದ್ದಾರೆ. ಅವರ ಸಲಹೆ ಸಹಕಾರದಿಂದ ಕ್ರೀಡೆಯಲ್ಲಿ ಮುಂದುವರೆಯಲು ಸಾಧ್ಯವಾಗಿದೆ. ಕ್ರೀಡೆಯು ಎಲ್ಲರ ಬದುಕಿನಲ್ಲಿ ಬಹುಮುಖ್ಯವಾದ ಅಂಗ. ಆರೋಗ್ಯ ಸುಧಾರಣೆಗಾಗಿ ಎಲ್ಲರು ಕ್ರೀಡೆಯನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಮಹಿಳೆಯರು ಮಾನಸಿಕ ಒತ್ತಡದಿಂದ ಹೊರ ಬರಲು ಸಂಘ-ಸAಸ್ಥೆಗಳಲ್ಲಿ ಗುರುತಿಸಿಕೊಂಡು ಸಮಾಜಸೇವೆ ಕೆಲಸಗಳನ್ನು ಮಾಡಬೇಕು. ಪ್ರತಿನಿತ್ಯ ಯಾವುದಾದರೊಂದು ಕ್ರೀಡೆಯನ್ನು ಅಭ್ಯಾಸ ಮಾಡಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಮಹಿಳೆಯರು ತಮ್ಮ ಕೆಲಸ ಒತ್ತಡದ ನಡುವೆ ತಮಗೊಂದು ವಿರಾಮ, ಸಾಮಾಜಿಕ ಚಟುವಟಿಕೆ ಮತ್ತು ಮನಸ್ಸಿಗೊಂದು ತಾಜಾತನ ಪಡೆಯಲು ಮನೆಯಿಂದ ಹೊರಬರಬೇಕು. ಇದನ್ನು ಅರಿತು ಮಹಿಳೆಯರು ಖುಷಿಯಿಂದ ಇರಬೇಕು ಎಂದರು.
ಆಟದಲ್ಲಿ ಸೋಲು ಗೆಲುವು ಎಂಬುದು ನಿಶ್ಚಿತ. ಗೆದ್ದವರಿಗೆ ಅಭಿನಂಧನೆಗಳು ಹಾಗೂ ಸೋತವರು ಕುಗ್ಗದೆ ಮುಂದಿನ ದಿನಗಳಲ್ಲಿ ಸಿಗುವ ಅವಕಾಶದಲ್ಲಿ ಮರು ಪ್ರಯತ್ನ ಮಾಡುವ ಜೊತೆಗೆ ಎಲ್ಲರು ಒಂದೊಳ್ಳೆಯ ಬಾಂಧವ್ಯದಿAದ ಖುಷಿಯ ಬುತ್ತಿಯನ್ನು ಮನೆಗೆ ಕೊಂಡೊಯ್ಯೊಣ ಎಂದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ರೀನಾ ಸುಜೇಂದ್ರ ಮಾತನಾಡಿ, ಕ್ರೀಡಾ ಮನೋಭಾವದಿಂದ ಕ್ರೀಡೆಯನ್ನು ಆಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕು. ಇಂದಿನ ದಿನಗಳ ಕಾರ್ಯದೊತ್ತಡದಿಂದಾಗಿ ಎಲ್ಲರಿಗೂ ಕ್ರೀಡೆಗೆ ಅವಕಾಶ ಸಿಗುವುದಿಲ್ಲ. ಮಹಿಳೆಯರು ಸಿಗುವ ಸಮಯದಲ್ಲಿ ವಾಕಿಂಗ್, ಯೋಗ, ಧ್ಯಾನವನ್ನು ಮಾಡುವಂತೆ ತಿಳಿಸಿದರು.
ಹಲವರು ಮನೆಕೆಲಸ ಮಾಡುವುದು ಚಟುವಟಿಕೆ ಎಂದು ಭಾವಿಸಿದ್ದಾರೆ. ಶಾಂತಚಿತ್ತರಾಗಿ ೧೦-೧೫ ನಿಮಿಷಗಳ ಕಾಲ ವಾಕ್ ಮತ್ತು ಯೋಗ ಮಾಡುವುದರಿಂದ ಮನಸ್ಸು ಹಾಗೂ ದೇಹಕ್ಕೆ ಒಳ್ಳೆಯದಾಗುತ್ತದೆ. ಎಲ್ಲರೂ ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ತಿಳಿಸಿದರು.
ಮನೋರಂಜನೆ ಉz್ದೆÃಶದಿಂದ ಕ್ರೀಡೆಯನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಗೆದ್ದವರು ಬೀಗದೆ ಸೋತವರು ಕುಗ್ಗದೆ ಸಮಾನ ರೀತಿಯಲ್ಲಿ ಸ್ವೀಕರಿಸಬೇಕು. ಥ್ರೋಬಾಲ್, ಶಾರ್ಟ್ಪುಟ್ ಆಟವನ್ನು ಆಯೋಜಿಸಲಾಗಿದ್ದು, ವಯಸ್ಸಿಗÀನುಸಾರ ಮೂರು ಗುಂಪುಗಳನ್ನಾಗಿ ವಿಂಗಡಿಸಿ ಆಟವನ್ನು ಆಡಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಉಪಾಧ್ಯಕ್ಷೆ ಕಾವ್ಯ ಸುಕುಮಾರ್, ಕಾರ್ಯದರ್ಶಿ ಅಮಿತಾ ವಿಜೇಂದ್ರ, ಸಹಕಾರ್ಯದರ್ಶಿ ಕೋಮಲ ರವಿ, ಮಾಜಿ ಅಧ್ಯಕ್ಷರಾದ ಗಾಯಿತ್ರಿ ಗೋವಿಂದ ಸ್ವಾಮಿ, ಅರುಣಾಕ್ಷಿ ನಾಗರಾಜ್, ಸ್ಮಿತಾ ಸುನೀಲ್, ನಿರ್ದೇಶಕರಾದ ಅನುಪಮ, ವೇದ, ಚÀಂಪ, ಮಂಜುಳ, ವಿನುತ, ಸುನೀತ, ಶಕುಂತಲಾ, ಕೀರ್ತಿ, ರಾಜೇಶ್ವರಿ, ತನುಜಾ, ಸಂಧ್ಯಾ ಉಪಸ್ಥಿತರಿದ್ದರು.