ಜಿಲ್ಲೆ

ಮಹಿಳೆಯರು ಆರೋಗ್ಯದತ್ತ ಕಾಳಜಿವಹಿಸಲು ಸಲಹೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶ್ರೀ ವೈಷ್ಣವಿ ಮಹಿಳಾ ಸಂಘ, ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ಐದೃಷ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಇಲ್ಲಿನ ಇಟಗಿ ಮಾರುತಿ ಗಲ್ಲಿಯ ಶ್ರೀ ಈಶ್ವರ ದೇವಸ್ಥಾನ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬುಧವಾರ ಏರ್ಪಡಿಸಲಾಗಿತ್ತು.

ಶ್ರೀ ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಮಾತನಾಡಿ, ಮಹಿಳೆಯರು ತಾವು ಕಲಿತ ವಿಷಯಗಳನ್ನು ತಮ್ಮ ಕುಟುಂಬ ಹಾಗೂ ಸಮಾಜಕ್ಕೆ ಪಸರಿಸಬೇಕು. ಇದರಿಂದ ಸದೃಢ, ಸಶಕ್ತ ಹಾಗೂ ಸುಶಿಕ್ಷಿತ ಸಮಾಜ ನಿರ್ವಣವಾಗಲಿದೆ ಎಂದರು.

ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಆಟೋ ರಿಕ್ಷಾದಿಂದ ಅಂತರಿಕ್ಷದವರೆಗಿನ ಎಲ್ಲ ರಂಗದಲ್ಲೂ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕುಟುಂಬದ ಆರ್ಥಿಕ ನಿರ್ವಹಣೆಯಲ್ಲೂ ಮಹಿಳೆಯರ ಪಾತ್ರ ಅಪಾರವಾಗಿದೆ. ಮಹಿಳೆಯರು ತಮ್ಮ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಉತ್ತಮ ಆರೋಗ್ಯದಿಂದ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮಹಿಳಾ ಸಂಘದ ಅಧ್ಯಕ್ಷೆ ಶೈಲಾ ಅಂಗಡಿ ಮಾತನಾಡಿದರು.

ಪದಾಧಿಕಾರಿಗಳಾದ ಮಧು ಉಪ್ಪಿನ, ಉಮಾ ಸಾಲಿಮಠ, ನಿರ್ಮಲಾ ಹವಳೆ, ಪ್ರತಿಕ್ಷಾ ರುದ್ರಾಪುರ, ಪೂಜಾ ರುದ್ರಾಪುರ, ನಂದಾ ಸಾಲಿಮಠ, ಗುಣಶೀಲಾ ಹುಕ್ಕೇರಿಮಠ, ಚಂದ್ರಿಕಾ ಶೆಟ್ಟರ್, ಡಾ. ರಾಜಶೇಖರ, ಡಾ. ಅಖಿಲೇಶ ಜೋಶಿ, ಡಾ. ಅಭಯಾಂಬಿಕಾ, ಡಾ. ರಾಜು ಪೂಜಾರ, ಗಂಗಾಧರಯ್ಯ ಸಾಲಿಮಠ, ನೀಲಕಂಠ ತಡಸದಮಠ, ಇತರರು ಇದ್ದರು.