ಚಿಕ್ಕಮಗಳೂರು: ಎಕೋಗ್ರೀನ್ ಸಂಸ್ಥೆಯಿAದ ಬಾಳೆನಾರು, ಅಡಕೆತಟ್ಟೆ, ತೆಂಗಿನ ಚಿಪ್ಪು ಬಳಸಿ ಉತ್ಪನ್ನಗಳಾದ ಕರಕುಶಲ ವಸ್ತು ತಯಾರಿಸಿ ಕಳೆದ ಹಲವಾರು ವರ್ಷಗಳಿಂದ ವಿದೇಶಿಗಳಿಗೆ ರಫ್ತು ಮಾಡುತ್ತಿದ್ದು, ಇದರ ಜೊತೆಗೆ ಲಾವಂಚ ಹುಲ್ಲಿನಿಂದ ಸೋಪು ಮತ್ತು ಸೌಂದರ್ಯ ವರ್ಧಕಗಳನ್ನು ತಯಾರಿಸಿದ್ದು, ಈ ಬಗ್ಗೆ ಜಿಲ್ಲೆಯಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುವುದು ಎಂದು ಎಕೋಗ್ರೀನ್ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಶುಭಾ ಮಂಜುನಾಥ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳೆಗೊನೆ ಕಡಿದ ನಂತರ ಅನುಪಯುಕ್ತವಾಗಿ ಬಿಸಾಡುವ ದಿಂಡು ಮತ್ತು ರಪ್ಪೆಗಳನ್ನು ಸಂಸ್ಕರಿಸಿ ವಿವಿಧ ಕರಕುಶಲ ವಸ್ತುಗಳನ್ನು ತಯಾರಿಸಬಹುದಾಗಿದೆ. ಸಣ್ಣ ಉದ್ದಿಮೆಗಳು ಹಾಗೂ ಮಹಿಳೆಯರಿಗೆ ಈ ಕುರಿತು ತರಬೇತಿ ನೀಡಲಾಗುವುದು ಎಂದರು.
ಮಣ್ಣಿನ ಸವಕಳಿಯನ್ನು ತಡೆಯುವ ಶಕ್ತಿ ಹೊಂದಿರುವ ಲಾವಂಚ ಹುಲ್ಲಿನಿಂದ ಸೋಪು ತಯಾರಿಕೆ ಮತ್ತು ಶಾಂಪು ಮುಂತಾದ ಸೌಂದರ್ಯ ವರ್ಧಕಗಳನ್ನು ಉತ್ಪಾದಿಸಬಹುದಾಗಿದೆ. ಸಾಮಾನ್ಯ ಮನೆಯ ಟೆರೆಸ್ ಮೇಲೆ ಲಾವಂಚ ಬೆಳೆಯಬಹುದಾಗಿದೆ. ವರ್ಷಕ್ಕೆ ೨ ಬೆಳೆ ತೆಗೆಯಬಹುದಾಗಿದ್ದು, ಲಾಭದಾಯಕ ಕೃಷಿ ಇದಾಗಿದೆ. ಮಹಿಳೆಯರು ಸುಲಭವಾಗಿ ಈ ಕೃಷಿಯಲ್ಲಿ ತೊಡಗಬಹುದಾಗಿದೆ ಎಂದು ಈ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಈ ಸಂಬAಧ ತರಬೇತಿ ನೀಡುವ ಸಲುವಾಗಿ ಜಿಪಂ ಸಿಇಒ ಎಚ್.ಎಸ್ ಕೀರ್ತನ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಕೈಗಾರಿಕೆ ಇಲಾಖೆ ಮೂಲಕ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಕೋಗ್ರೀನ್ ಸಂಸ್ಥೆಯ ಯೋಜನ ನಿರ್ದೇಶಕ ಎಸ್.ಕೆ.ಬಾಬು ಉಪಸ್ಥಿತರಿದ್ದರು.