ಜಿಲ್ಲೆ

ಮಹಿಳೆಯರಿಗೆ ಬಯಲು ಬಹಿರ್ದೆಸೆ ಅನಿವಾರ್ಯ

ಅಶೋಕ್ ಕುಮಾರ್ ಎನ್

ಹಟ್ಟಿಚಿನ್ನದಗಣಿ: ಪಟ್ಟಣದ 8ನೇ ವಾರ್ಡ್ ಹಟ್ಟಿಹೊಸೂರಿನಲ್ಲಿರುವ ಸಾರ್ವಜನಿಕ ಮಹಿಳಾ ಶೌಚಗೃಹ ಪಾಳು ಬಿದ್ದಿದ್ದು, ನಿವಾಸಿಗಳು ಬಹಿರ್ದೆಸೆಗಾಗಿ ಬಯಲನ್ನೇ ಅವಲಂಬಿಸಿದ್ದಾರೆ. ನಿರ್ವಹಣೆ ಇಲ್ಲದೆ ಶೌಚಗೃಹದ ಸುತ್ತಮುತ್ತ ಗಿಡಗಂಟಿ ಬೆಳೆದಿವೆ.

ಶೌಚಗೃಹದ ಮುಂದೆ ಚರಂಡಿ ತ್ಯಾಜ್ಯ ಮಡುಗಟ್ಟಿ ಶೌಚಗೃಹಕ್ಕೆ ಹೋಗಲು ದಾರಿಯಿಲ್ಲದಂತಾಗಿದೆ. ಶೌಚಗೃಹ ಹಾಗೂ ಸುತ್ತಮುತ್ತಲಿನ ವಾತಾವರಣದ ಸ್ವಚ್ಛತೆಗಾಗಿ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಶೌಚಗೃಹಕ್ಕೆ ಛಾವಣಿಯೂ ಇಲ್ಲ. ಇದರಿಂದಾಗಿ ಮಹಿಳೆಯರಿಗೆ ಬಯಲು ಬಹಿರ್ದೆಸೆ ಅನಿವಾರ್ಯ ಎನ್ನುವಂತಾಗಿದೆ.