ಜಿಲ್ಲೆ

ಮಹಿಳೆಯರಿಗಾಗಿ ಮಾಸ್ಕ್ ತಯಾರಿಕೆ

ವಾದಿರಾಜ ವ್ಯಾಸಮುದ್ರ ಕಲಬುರಗಿ: ಅವರು ರಾಜ್ಯದ ದೊಡ್ಡ ನಿಗಮಗಳಲ್ಲೊಂದರ ಅಧ್ಯಕ್ಷೆ. ಮನಸ್ಸು ಮಾಡಿದರೆ ಕುಳಿತಲ್ಲೇ ಎಲ್ಲ ಕೆಲಸಗಳನ್ನು ಮಾಡಿಸಬಹುದು. ಅಷ್ಟೊಂದು ಅಧಿಕಾರ ಅವರಿಗಿದೆ. ಆದರೆ ಅವರು ಅಧಿಕಾರಕ್ಕೆ ಜೋತು ಬಿದ್ದಿಲ್ಲ. ಬದಲಿಗೆ ಜನ ಸೇವೆಯಲ್ಲಿ ತೊಡಗಿದ್ದಾರೆ. ತಾವೇ ಖುದ್ದು ಮಾಸ್ಕ್ಗಳನ್ನು ತಯಾರಿಸಿ ಬಡ ಮಹಿಳೆಯರಿಗೆ ಹಂಚಿ ಮಾನವೀಯತೆ ಮೆರೆಯುತ್ತಿದ್ದಾರೆ.
ಹೌದು, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಶಿಕಲಾ ಟೆಂಗಳಿ ಈ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕರೊನಾ ಅಟ್ಟಹಾಸ ಮೆರೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿದೆ. ಆದರೆ ಕೆಲವರಿಗೆ ಮಾಸ್ಕ್ ಖರೀದಿಸುವಷ್ಟೂ ದುಡ್ಡಿಲ್ಲ. ಇದನ್ನರಿತ ಶಶಿಕಲಾ ಟೆಂಗಳಿ ಉಚಿತ ಮಾಸ್ಕ್ ವಿತರಿಸುವತ್ತ ಹೆಜ್ಜೆ ಇರಿಸಿದ್ದಾರೆ.
ಹೊಲಿಗೆ ಯಂತ್ರ ಹೊಂದಿರುವ ಶಶಿಕಲಾ ಅವರು ಶುದ್ಧವಾದ ಬಟ್ಟೆ ತರಿಸಿ 5000 ಮಾಸ್ಕ್ಗಳನ್ನು ತಾವೇ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ 1000 ಹಸ್ತಾಂತರಿಸಿದ್ದು, ಉಳಿದವುಗಳನ್ನು ಬಡವರಿಗೆ ಹಂಚಿದ್ದಾರೆ. ಇನ್ನೂ 1000 ಮಾಸ್ಕ್ ಸಿದ್ಧಪಡಿಸಿ ದೇವದಾಸಿಯರಿಗೆ ನೀಡುವ ಸಿದ್ಧತೆಯಲ್ಲಿದ್ದಾರೆ.
ಮಹಿಳೆಯರ ಆಂತರಿಕ ಭಾವನೆಗಳನ್ನು ಅರಿತ ಶಶಿಕಲಾ, ಕಲಬುರಗಿ ತಾಲೂಕಿನ ಕೆಲವು ಹಳ್ಳಿ ಮತ್ತು ನಗರದ ಹಲವು ಪ್ರದೇಶಗಳ ಬಡ ಮಹಿಳೆಯರಿಗೆಮಾಸ್ಕ್ಳಳನ್ನು ವಿತರಿಸುತ್ತಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮನೆಗಳಲ್ಲಿ ಇರಬೇಕು. ಮಾಸ್ಕ್ ಹಾಕಿಕೊಂಡೇ ಅಗತ್ಯ ಕೆಲಸಗಳಿಗೆ ಹೊರಗಡೆ ಹೋಗಬೇಕು ಎಂಬ ಸಂದೇಶ ಸಾರುತ್ತ ಕರೊನಾ ನಿಯಂತ್ರಣ ಕೆಲಸದಲ್ಲಿ ತೊಡಗಿದ್ದಾರೆ.
ರಾಜ್ಯದ ಎಲ್ಲ ಬಡ ಮಹಿಳೆಯರಿಗೆ ಮಾಸ್ಕ್ ಕೊಡಿಸುವ ವ್ಯವಸ್ಥೆ ಮಾಡಬೇಕೆಂದು ಆಯಾ ಜಿಲ್ಲೆಗಳ ಮಹಿಳಾ ಅಭಿವೃದ್ಧಿ ನಿಗಮದ ಯೋಜನಾಧಿಕಾರಿಗಳಿಗೆ ಆದೇಶಿಸಿದ್ದಾರೆ. ಕರೊನಾ ನಿಯಂತ್ರಣಕ್ಕೆ ಬರುವವರೆಗೆ ಈ ಕೆಲಸ ಮುಂದುವರಿಯಲಿದೆ. ಈ ಕೆಲಸ ಮಾಡುತ್ತಿರುವುದು ಆತ್ಮತೃಪ್ತಿಗಾಗಿ ಹೊರತು, ಯಾವುದೇ ರಾಜಕೀಯ ಮಾಡುವ ಉದ್ದೇಶದಿಂದಲ್ಲ. ಬೆಳಗ್ಗೆ ವಾಕಿಂಗ್ ಹೋಗುವ ಸಮಯದಲ್ಲೂ ಒಂದಿಷ್ಟು ಮಾಸ್ಕ್ಗಳನ್ನು ತೆಗೆದುಕೊಂಡು ಹೋಗುತ್ತೇನೆ. ದಾರಿಯಲ್ಲಿ ಮಾಸ್ಕ್ ಹಾಕದವರು ಸಿಕ್ಕರೆ ಕೊಡುತ್ತೇನೆ ಎನ್ನುತ್ತಾರೆ. ಅವರ ಈ ಜನಪರ ಕೆಲಸ ಪ್ರಶಂಸೆಗೆ ಪಾತ್ರವಾಗಿದೆ.
ಮಾಸ್ಕ್ಗಳಲ್ಲದೆ ಕೆಲವು ಪೌರ ಕಾಮರ್ಿಕರು, ಮನೆ ಕೆಲಸದವರು, ಆಶಾ ಕಾರ್ಯಕತೆರ್ಯರು ಹೀಗೆ ಸುಮಾರು ಜನರಿಗೆ ಆಹಾರ ಸಾಮಗ್ರಿ ಕಿಟ್ಗಳನ್ನು ಕಲಬುರಗಿ ನಗರ ಮತ್ತು ಬೆಳಗುಂಪಿ, ತೊನಸನಹಳ್ಳಿ, ಟೆಂಗಳಿ, ಟೆಂಗಳಿ ತಾಂಡಾ, ಅರಜಂಬಗಾ, ಕಾಟನದೇವರಹಳ್ಳಿ ಮೊದಲಾದ ಕಡೆ ಹಂಚಿದ್ದೇನೆ.
| ಶಶಿಕಲಾ ಟೆಂಗಳಿ
ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರು