ಬಾಗಲಕೋಟೆ:ಭಾರತದಲ್ಲಿ ಗೃಹಣಿಯರು ಕುಟುಂಬದ ಆರ್ಥಿಕತೆಯನ್ನು ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ 50 ರಿಂದ 100 ವರ್ಷಗಳಲ್ಲಿ ಮಹಿಳೆಯರಿಂದಲೇ ಭಾರತದ ಆರ್ಥಿಕತೆ ಸುಧಾರಿಸಲಿದೆ. ಆ ನಿಟ್ಟಿನಲ್ಲಿ ಜಗತ್ತಿನ ಆರ್ಥಿಕತೆಯ ಶ್ರೇಣಿಯಲ್ಲಿ ಭಾರತ ಹೆಚ್ಚಿನ ಸ್ಥಾನ ಪಡೆಯಬೇಕೆಂದರೆ ಮಹಿಳೆಯರಿಂದಲೇ ಸಾಧ್ಯ ಎಂದು ಯುಕೆ ಮತ್ತು ಕಂಪನಿ ಸಂಸ್ಥಾಪಕ ಕೆ. ಉಲ್ಲಾಸ ಕಾಮತ್ ಹೇಳಿದರು.
ನಗರದ ಬಿವಿವಿ ಸಂದ ಬಿಇ ಕಾಲೇಜು ಸಭಾ ಭವನದಲ್ಲಿ ಸೋಮವಾರ ನಡೆದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡಿಸ್ ಪದವಿ ಪ್ರದಾನಮಾಡಿ ಮಾತನಾಡಿದರು.ಎಂಬಿಎ ಸ್ನಾತಕೋತ್ತರ ಶಿಣ ಮುಗಿಸಿ ಪದವಿ ಪಡೆಯುವುದು ಒಂದು ಮುಖ್ಯ ಟ್ಟ. ಆದರೆ, ಜೀವನದಲ್ಲಿ ಓದು, ಪರೀೆಗಳು ನಿರಂತರ. ಇಂದಿನ ಮಕ್ಕಳಿಗೆ ಮೊಬೈಲ್ ಮುಖ್ಯವಾದರೂ ಅದರ ಮೇಲೆ ಅವಲಂಬಿತವಾಗಬಾರದು. ಜ್ಞಾನಕ್ಕಾಗಿ ಮೊಬೈಲ್ ಬಳಸಿ, ಸ್ಟೇಟಸ್, ಸೆಲ್ಪಿ, ರೀಲ್ಸ್ಗಳಿಂದ ಯಾವುದೇ ಪ್ರಯೋಜನವಿಲ್ಲ. ಕರ್ನಾಟಕದಲ್ಲಿ ಪ್ರತಿವರ್ಷ 21 ಲ ಪದವೀಧರರು ಔದ್ಯೋಗಿಕ ೇತ್ರಕ್ಕೆ ಬರುತ್ತಾರೆ. ಸುಮಾರು 20 ಲ ಉದ್ಯೋಗಗಳು ಸಷ್ಟಿಯಾಗುತ್ತಲೇ ಇವೆ. ಈ ಉದ್ಯೋಗಗಳು ನಮಗೆ ಸಿಗಬೇಕಾದರೆ ಸಂದರ್ಶನದಲ್ಲಿ ಕೌಶಲಗಳನ್ನು ಪ್ರದರ್ಶಿಸಬೇಕಾಗುತ್ತದೆ ಎಂದರು.
ಉತ್ತರ ಕರ್ನಾಟಕದ ಜನರ ಪ್ರಾಮಾಣಿಕತೆ, ನಿಷ್ಠೆ, ಕಾರ್ಯಮತೆ ಎಲ್ಲರಿಗೂ ಇಷ್ಟವಾಗುತ್ತದೆ. ಶಾಲೆ ಕಾಲೇಜುಗಳಲ್ಲಿ ತಂದೆ ತಾಯಿಗಳು ನಿಮ್ಮ ಮೇಲೆ ಬಂಡವಾಳ ಹಾಕಿ ಪದವೀಧರರನ್ನಾಗಿ ಮಾಡುತ್ತಾರೆ. ಕಂಪನಿಗಳು ನಿಮ್ಮ ಮೇಲೆ ಬಂಡವಾಳ ಹಾಕಿ ಕಂಪನಿಯ ರಾಯಬಾರಿಯನ್ನಾಗಿ ಮಾಡುತ್ತವೆ ಎಂಬ ಅರಿವು ನಮಗಿರಬೇಕು. ಜಗತ್ತಿನಲ್ಲಿ 100 ಟ್ರಿಲಿಯನ್ ಡಾಲರ್ಸ್ ವ್ಯಾಪಾರ ವಹಿವಾಟು ಇದೆ. ಜಗತ್ತಿನಲ್ಲಿ 800 ಕೋಟಿ ಜನ ಇದ್ದಾರೆ. ಅದರಲ್ಲಿ 140 ಕೋಟಿ ಭಾರತದಲ್ಲಿದ್ದಾರೆ. ಕರ್ನಾಟಕದಲ್ಲಿ 7 ಕೋಟಿ ಜನ ಇದ್ದಾರೆ. ಜಗತ್ತಿನಲ್ಲಿ ಜನಸಂಖ್ಯೆ ಪ್ರಕಾರ ಶೇ. 14 ಇದ್ದಿವೆ. ಜಿಡಿಪಿ ಪ್ರಕಾರ 4ನೇ ಸ್ಥಾನದಲ್ಲಿದ್ದೇವೆ.
ಭಾರತದಲ್ಲಿ ಅದರಲ್ಲೂ ದಣ ಭಾರತ ಶೈಣಿಕವಾಗಿ ಮುಂದುವರಿದಿದ್ದು ಅದರಲ್ಲೂ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.ಬಾಗಲಕೋಟೆ ವಿಶ್ವವಿದ್ಯಾಲಯದ ಉಪಕುಲಪತಿ ಆನಂದ ದೇಶಪಾಂಡೆ ಮಾತನಾಡಿ, ಬಿವಿವಿ ಸಂದ ಎಲ್ಲ ಶಿಣ ಸಂಸ್ಥೆಗಳನ್ನು ನೋಡಿದರೆ ಅದ್ಭುತ ಎನಿಸುತ್ತದೆ. ಇಲ್ಲಿ ಉತ್ತಮ ಶಿಕರ ತಂಡ ಇದೆ. ಒಳ್ಳೆಯ ಮೂಲ ಸೌಕರ್ಯವಿದೆ. ರಾಜ್ಯಕ್ಕೆ ಇದೊಂದು ಮಾದರಿ ಸಂಸ್ಥೆ ಎಂದು ಬಣ್ಣಿಸಿದರು.ಅಧ್ಯತೆ ವಹಿಸಿದ್ದ ಸಂದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಿ ವ್ಯಾಪಾರ, ವ್ಯವಹಾರ ಹಾಗೂ ಮಾರುಕಟ್ಟೆ ೇತ್ರ ಬೆಳೆಯಬೇಕೆಂಬ ಸಂದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರ ಆಶಯದಂತೆ ಎಂಬಿಎ ಸಂಸ್ಥೆ ಉತ್ತಮ ವಿದ್ಯಾರ್ಥಿಗಳನ್ನು ನಾಡಿಗೆ ನೀಡುತ್ತಿದೆ ಎಂದರು.
ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯ ಗುರುಬಸವ ಸೂಳಿಬಾವಿ, ನಿರ್ದೇಶಕ ಡಾ. ಪ್ರಕಾಶ ವಡವಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಇನ್ಸ್ಟಿಟ್ಯೂಟ್ ಮ್ಯಾನೇಜ್ಮೇಂಟ್ ಸ್ಟಡಿಸ್ನ ಸುಮಾರ 60 ಜನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಬಿವಿವಿ ಸಂದ ಇನ್ಸ್ಟಿಟ್ಯೂಟ್ ಮ್ಯಾನೇಜ್ಮೇಂಟ್ ಸ್ಟಡಿಸ್ನ ಪದವಿಯನ್ನು ಯುಕೆ ಮತ್ತು ಕಂಪನಿ ಸಂಸ್ಥಾಪಕ ಕೆ. ಉಲ್ಲಾಸ ಕಾಮತ್ ಪ್ರದಾನ ಮಾಡಿದರು. ಬಾಗಲಕೋಟೆ ವಿವಿ ಉಪಕುಲಪತಿ ಡಾ. ಆನಂದ ದೇಶಪಾಂಡೆ, ಮಹೇಶ್ ಅಥಣಿ, ಗುರುಬಸವ ಸೂಳಿಬಾವಿ ಮತ್ತಿತರರಿದ್ದರು.