ಬಸವಕಲ್ಯಾಣದಲ್ಲಿ ಸಾರ್ವಜನಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮದಲ್ಲಿ ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞ್ ಪ್ರವಚನ ನೀಡಿದರು. ದತ್ತಾತ್ರೇಯ ಗಾದಾ, ರಾಜು.ಡಿ.ಬಣಕಾರ, ಅಲಿಸಾಬ್, ಮೀರ್ ಅಜರಅಲಿ ನವರಂಗ್, ಅರ್ಜುನ ಕನಕ, ಮುಹಮ್ಮದ ಯುಸೂಫ್ ಕುನ್ನಿ, ಮೌಲಾನಾ ಅಬ್ದುಸ್ ಸಲಾಮ್‌ಸಾಬ್, ಲತಾ ಹಾರಕೂಡೆ ಇತರರಿದ್ದರು. 
ಜಿಲ್ಲೆ

ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಲಿ

ಬಸವಕಲ್ಯಾಣ: ಧಾರ್ಮಿಕ ಚಿಂತನೆ, ಧರ್ಮದ ಸಂದೇಶಗಳು ಖಂಡಿತವಾಗಿಯೂ ಭಯ, ನಿರಾಸೆಯಿಂದ  ಮುಕ್ತಗೊಳಿಸಿ ಭರವಸೆ ಕೊಡುತ್ತವೆ ಎಂದು ಮಂಗಳೂರಿನ ಖ್ಯಾತ ಪ್ರವಚನಕಾರ ಮುಹಮ್ಮದ್ ಕುಂಞ್ ಹೇಳಿದರು.

ಜಮಾತೆ ಇಸ್ಲಾಮಿ ಹಿಂದ್ ತಾಲೂಕು ಶಾಖೆಯಿಂದ ನಗರದ ರಥ ಮೈದಾನದ ಬಿಕೆಡಿಬಿ ಸಭಾಂಗಣದಲ್ಲಿ ೯ನೇ ವಾರ್ಷಿಕ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆ ವಿಷಯ ಕುರಿತು ಮಾತನಾಡಿದ ಅವರು, ಅಪನಂಬಿಕೆಗಳನ್ನು ದೂರ ಮಾಡಿ, ಭರವಸೆಯ ಸಮಾಜ ನಿರ್ಮಿಸಬೇಕು ಎನ್ನುವುದೇ ಪ್ರವಚನದ ಉದ್ದೇಶ. ಧರ್ಮದ ವಿಷಯದಲ್ಲಿ ವಿಭಜನೆಯ ಗೋಡೆ ಒಡೆದು ಪ್ರೀತಿ, ಭಾತ್ವತ್ವದ ಸೇತುವೆ ನಿರ್ಮಿಸಬೇಕಾಗಿದೆ ಎಂದರು.

ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನ ನ್ಯಾಯ ಸಿಗಬೇಕು. ಸಮಾನ ಗೌರವ ಸಿಗಬೇಕು ಎಂದು ಕುರಾನ್ ಕಲಿಸಿಕೊಡುತ್ತದೆ. ಇದಕ್ಕಾಗಿ ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೇಷ್ಟಿಕೋನ ಬದಲಾಗಬೇಕಾದ ಅವಶ್ಯತೆ ಇದೆ ಎಂದು ಪ್ರತಿಪಾದಿಸಿದರು.

ಪುರುಷ ಮತ್ತು ಮಹಿಳೆ ಸಮಾಜದ ಅವಿಭಾಜ್ಯ ಅಂಗ. ಎಲ್ಲ ವಿಷಯದಲ್ಲಿಯೂ ಅವರು ಪರಸ್ಪರ ಸಹಕಾರಿ. ನಾಗರಿಕತೆ, ಸಂಸ್ಕೃತಿ ಬೆಳೆದದ್ದು ಹಾಗೆಯೇ. ಇದನ್ನು ಬೆಳೆಸುವಲ್ಲಿ ಇವರ ಪಾಲಿದೆ. ಪುರುಷ ಮತ್ತು ಮಹಿಳೆಯನ್ನು ಪರಸ್ಪರ ಜೋಡಿ ಎಂದು ಪವಿತ್ರ ಕುರಾನ್‌ನಲ್ಲಿ ಹೇಳಲಾಗಿದೆ ಎಂದರು.

ನಗ್ನತೆಯ ಸ್ವಾತಂತ್ರ್ಯಎಂದು ಬಂಡವಾಳ ಶಾಹಿಗಳು ಕಲಿಸಿಕೊಡುತ್ತಿದ್ದಾರೆ. ಮಹಿಳೆಯ ಅಂಗಾಗ ಪ್ರದರ್ಶಿಸಿ ದುಡ್ಡು ಮಾಡುತ್ತಿದ್ದಾರೆ. ಪೂರ್ಣ ಬಟ್ಟೆ ಧರಿಸುವುದು ಅನಾಗರಿಕತೆ ಎಂದು ಯಾವ ಧರ್ಮಗ್ರಂಥಗಳು ಕಲಿಸಿಕೊಟ್ಟಿಲ್ಲ. ಆದರೆ ದುಡ್ಡು ಮಾಡಲು ಇದನ್ನು ಹೇಳಿಕೊಟ್ಟಿದ್ದು ಭೌತಿಕವಾದಿಗಳು, ಬಂಡವಾಳ ಶಾಹಿಗಳು. ಇವರು ನಾಗರಿಕತೆ, ಸಂಸ್ಕೃತಿಗೆ ವಿರುದ್ಧವಾದ ಕೆಲಸ ಮಾಡುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಧಾರ್ಮಿಕ ಗ್ರಂಥಗಳು ಕಲಿಸಿಕೊಟ್ಟ ಮೌಲ್ಯಗಳ ಕಡೆಗೆ ಮರಳಬೇಕಾಗಿದೆ ಎಂದು ಹೇಳಿದರು.

ತಹಸೀಲ್ದಾರ್ ದತ್ತಾತ್ರೇಯ ಗಾದಾ, ಅಕ್ಕಲಕೋಟದ ಡಾ.ಗುರುಲಿಂಗಪ್ಪ ಧಬಾಲೆ, ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಎಂಡಿ ಮಲ್ಲಿಕಾರ್ಜುನ ಗುಂಗೆ, ಮೌಲಾನಾ ಅಬ್ದುಸ್ ಸಲಾಮ್‌ಸಾಬ್, ಜಮಾತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಯುಸೂಫ್ ಕುನ್ನಿ ಮಾತನಾಡಿದರು.

ಪೌರಾಯುಕ್ತ ರಾಜು ಡಿ.ಬಣಕಾರ, ಸಿಪಿಐ ಅಲಿಸಾಬ್, ಮೀರ್ ಅಜರಅಲಿ ನವರಂಗ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಪ್ರಮುಖರಾದ ಅರ್ಜುನ ಕನಕ, ದಿಲೀಪ ಸಿಂಧೆ, ನಾರಾಯಣರಾವ ಬುನ್ನಾ, ಡಾ.ಅಪರ್ಣ ಮಹಾನಂದ, ಸುಧೀರ ಕಾಡಾದಿ, ಲತಾ ಹಾರಕೂಡೆ, ಆಕಾಶ ಖಂಡಾಳೆ, ಸುಭಾಷ ರಗಟೆ, ಖಲೀಲ್, ಅಸ್ಲಂ ಜನಾಬ್, ಮುಜಾಹಿದ್ ಪಾಶಾ ಖುರೇಶಿ, ಡಾ.ಜಿ.ಎಸ್.ಭುರಳೆ, ಶಿವಾನಂದ ಮೇತ್ರೆ, ಗುರುನಾಥ ಗಡ್ಡೆ, ಮೌಲಾನಾ ಅಬ್ದುಲ್ ಸಲಾಮ ಹಾಸ್ಮಿ, ಶಾಂತಲಿಂಗ ಮಠಪತಿ, ಮಿರ್ಜಾ ಅನ್ವರ್ ಬೇಗ್, ನೈಯಿಮೋದ್ದಿನ್ ಇತರರಿದ್ದರು.

ಫರ್ಜಾನಾ ನಾಝ್ಮಿ ಭೋಸಗೆ ಸ್ವಾಗತಿಸಿದರು. ಯುಸೂಫೋದ್ದಿನ್ ನಿಲಂಗೆ ವಂದಿಸಿದರು. ಝಬಿಯೋದ್ದಿನ್ ಝಾರಿಗರ್ ನಿರೂಪಣೆ ಮಾಡಿದರು.