ಜಿಲ್ಲೆ

ಮಹಿಳೆಯರ ಸಾಂಸ್ಕೃತಿಕ ಕಾರ್ಯಕ್ರಮ 18ರಂದು

ಕಲಬುರಗಿ: ವಿಶ್ವ ಮಹಿಳಾ ದಿನದ ನಿಮಿತ್ತ ಮಾ.೧೮ರಂದು ಬೆಳಗ್ಗೆ ೧೧ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯಿಂದ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ, ಮಹಿಳೆಯರ ವಿವಿಧ ಬೇಡಿಕೆ ಮನವಿ ಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ಸಮಿತಿ ಸಂಚಾಲಕಿ ಶಾಂತಾ ಘಂಟಿ ತಿಳಿಸಿದರು.

ಮಹಿಳಾ ದೌರ್ಜನ್ಯ ನೀಗಬೇಕು, ಮಹಿಳೆಯರಿಗೆ ಚೈತನ್ಯ ನೀಡಬೇಕು, ಸ್ತಿçà ಸಬಲೀಕರಣದ ಜಾಗೃತಿಗಾಗಿ ಕಾರ್ಯಕ್ರಮ ಆಯೋಜಿಸಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳ ನೂರಾರು ದುಡಿಯುವ ಮಹಿಳೆಯರು ಭಾಗವಹಿಸಲಿದ್ದು, ನೃತ್ಯ, ಕಿರು ನಾಟಕ, ಹಾಡು, ಕಥೆ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮಹಿಳಾ ಜಿಲ್ಲಾಧಿಕಾರಿಯಿಂದ ನರೇಗಾ ಮಹಿಳಾ ಕಾರ್ಮಿಕರವರೆಗೆ ಎಲ್ಲರೂ ದುಡಿಯುವ ಮಹಿಳೆಯರೇ. ಅವರಿಗೆ ಗುಣಮಟ್ಟದ ಉದ್ಯೋಗ ನೀಡಬೇಕು, ವಿವಿಧ ಯೋಜನೆಯಲ್ಲಿ ಗೌರವಧನದ ಆಧಾರದಲ್ಲಿ ಕೆಲಸ ಮಾಡುವವರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಸೇವಾ ಭದ್ರತೆ, ಗ್ರಾÈಚ್ಯುಟಿ ಸೇರಿ ವಿವಿಧ ಸೌಲಭ್ಯ ನೀಡಬೇಕು, ಮಹಿಳೆಯರಿಗೆ ಮುಟ್ಟಿನ ರಜೆ, ಹೆರಿಗೆ ರಜೆ ಸೌಲಭ್ಯ ನೀಡಬೇಕು ಎಂದರು. ಎಲ್ಲ ವಲಯಗಳಲ್ಲಿ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಖಚಿತಪಡಿಸಬೇಕು, ಸಂಸತ್ತು ಮತ್ತು ರಾಜ್ಯ ವಿಧಾನ ಸಭೆಗಳಲ್ಲಿ ಮಹಿಳೆಯರಿಗೆ ಶೇ.೩೩ ಮೀಸಲು ಜಾರಿಗೆ ತರಬೇಕು, ನರೇಗಾ ಕೆಲಸವನ್ನು ನಗರಗಳಿಗೆ ವಿಸ್ತರಿಸಿ ದಿನದ ಕೂಲಿ ರೂ.೬೦೦ಗೆ ಹೆಚ್ಚಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಗೌರಮ್ಮ ಪಾಟೀಲï, ವಿಜಯಲಕ್ಷಿö್ಮÃ ಹಿರೇಮಠ, ಸಂಗೀತಾ ಗುತ್ತೇದಾರ್, ಎಂ.ಬಿ.ಸಜ್ಜನ್, ನಾಗಯ್ಯ ಸ್ವಾಮಿ ಇತರರಿದ್ದರು.