ಜಿಲ್ಲೆ

ಮಹಿಳೆಯರ ಸಬಲೀಕರಣ ಆಗಲಿ

ರಾಯಬಾಗ: ಮಹಿಳೆಯರು ಹೆಚ್ಚಾಗಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಸಬಲೀಕರಣ ಆಗಬೇಕು ಎಂದು ಉಪನ್ಯಾಸಕಿ ಪಿ.ಕೆ.ಪಾಟೀಲ ಹೇಳಿದರು.

ಪಟ್ಟಣದ ಎಸ್‌ಪಿಎಂ ಮಹಾವಿದ್ಯಾಲಯದಲ್ಲಿ ಎಂಕಾಂ, ಎಂಎ (ರಾಜ್ಯಶಾಸ್ತ್ರ) ವಿಭಾಗ, ಮಹಿಳಾ ಸಬಲೀಕರಣ ಘಟಕ ಹಾಗೂ ಸಾಂಸ್ಕೃತಿಕ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಪ್ರಯುಕ್ತ ಗುರುವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಮತ್ತು ನೃತ್ಯ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆ ಇಂದು ಪುರುಷರ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಜತೆಗೆ ಸಾಧಕ ಮಹಿಳೆಯರ ಆದರ್ಶ ಅಳವಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು ಎಂದರು.

ಎಸ್‌ಪಿಎಂ ನಿರ್ದೇಶಕಿ ಭಾಗ್ಯಶ್ರೀ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಐ.ಎಸ್.ಗೋಕಾಕ, ಪ್ರಾಧ್ಯಾಪಕರಾದ ಆರ್.ಎಸ್.ಗುಡೋಡಗಿ, ವಿದ್ಯಾಶ್ರೀ ದೊಡ್ಡಮನಿ, ಡಾ.ಪಿ.ಆರ್. ರಾಮತೀರ್ಥ, ಡಾ.ರಣಧೀರ ಕಾಂಬಳೆ, ಎಲ್.ಎಸ್.ಹೊಸಟ್ಟಿ, ಎಸ್.ಬಿ.ಮರಲಿಂಗನ್ನವರ, ಪಿ.ಎಸ್.ಕಾಂಬಳೆ, ಎಸ್.ಎಂ.ಗುತ್ತಿ, ಆರ್.ಬಿ. ಪಾಂಡ್ರೆ, ಎಸ್.ವೈ. ಗೊಟನೆ, ಎಸ್.ಎಸ್. ಮುಲ್ಲಾ, ಎಲ್.ಎಂ. ಹಿರೇಕೊಡಿ, ಎಸ್.ಎ. ಬಾಗಿ, ಎಂ.ಎಂ. ಮೊಮಿನ್, ಎ.ಎಸ್. ಗೌಂಡಿ, ಎಂ.ಎ. ತರತರಿ ಇತರರಿದ್ದರು.