ಚಿತ್ರದುರ್ಗ: ಮಣಿಪುರದಲ್ಲಾದ ಮಹಿಳೆಯರ ಬೆತ್ತಲೆ ಮೆರವಣಿಗೆ ಘಟನೆಯನ್ನು ಖಂಡಿಸಿ ಅಲ್‌ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎ ಐಎಂಎಸ್‌ಎಸ್)ಮತ್ತು ಆಲ್‌ಇಂಡಿಯಾ ಡೆಮಾಕ್ರೆಟಿಕ್‌ಯೂತ್‌ಆರ್ಗನೈಸೇಷನ್(ಎಐಡಿವೈಒ)ಸಂಘಟನೆಗಳ ಕಾರ‌್ಯಕರ್ತರು ನಗರದ ಒನಕೆ ಓಬವ್ವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಮಹಿಳೆಯರ ಮೇಲಿನ ಈ ಅವಮಾನವೀಯ,ಹೇಯ ಹಾಗೂ ಘೋರ ಕೃತ್ಯಕ್ಕೆ ಕಾರಣರಾದ ತಪ್ಪಿಸ್ಥತರಿಗೆ ಕಠಿಣ ಶಿಕ್ಷೆ ವಿಧಿಸ ಬೇಕು. 2 ತಿಂಗಳಿಗೂ ಅಧಿಕ ಕಾಲದಿಂದ ಮಣಿಪುರದಲ್ಲಿ ನಿರಂತರ ನಡೆಯುತ್ತಿರುವ ಹಿಂಸಾಚಾರ,ಮಹಿಳೆಯರ ಮೇಲಿನ ದೌರ್ಜನ್ಯ,ಅಶಾಂತಿಯಂಥ ದುರ್ಘಟನೆಗಳನ್ನು ನಿಯಂತ್ರಿಸುವಂತೆ ಪ್ರತಿಭಟನಾನಿರತರು ಕೇಂದ್ರ ಮತ್ತು ಮಣಿಪುರ ಸರ್ಕಾರಗಳನ್ನು ಒತ್ತಾಯಿಸಿದರು.
ಅಲ್ಲಿಯ ಜನರ,ಮಾನ,ಪ್ರಾಣಗಳನ್ನು ಕಾಪಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೋಮು ದ ಳ್ಳುರಿಯಲ್ಲಿ ಬೇಯತ್ತಿರುವ ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ದಿಟ್ಟ ನಿಲುವುಗಳನ್ನು ಕೈಕೊಳ್ಳ ಬೇಕೆಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಎರಡೂ ಸಂಘಟನೆಗಳ ಪ್ರಮುಖರಾದ ರವಿಕುಮಾರ್,ಕುಮುದಾ,ಸುಜಾತ,ನಿಂಗರಾಜು,ಅರುಣ್,ಶಮಂತ್,ಗಿರಿಜಮ್ಮ,ಶ್ರೀದೇವಿ, ಸಂದೀಪ್, ಧನಂಜಯ,ನಾಗವೇಣಿ,ದಿವ್ಯಾ,ಅಂಬಿಕಾ,ರಾಧಾ,ಆಶಾ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.
ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ
ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ನಗರದಲ್ಲಿ ಅಡ್ಡಾಡುತ್ತಿರುವ ಬೀಡಾಡಿ ದನಗಳನ್ನು ರಕ್ಷಿಸಿ ಗೋಶಾಲೆಗೆ ಕಳಿಸುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜ ರ ಂಗದಳ ಕಾರ‌್ಯಕರ್ತರು ಸೋಮವಾರ ನಗರಸಭೆ ಪೌರಾಯುಕ್ತ ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದರು.
ಬೀಡಾಡಿ ದನಗಳನ್ನು ರಕ್ಷಿಸಿ ಅವುಗಳ ಮಾಲೀಕರಿಗೆ ಒಪ್ಪಿಸ ಬೇ ಕು ಅಥವಾ ಗೋ ಶಾಲೆಗೆ ಕಳಿಸ ಬೇಕು. ಆ ಮೂಲಕ ಇವುಗಳಿಂದ ನಗರದಲ್ಲಿ ವಾಹನಗಳ ಸಂಚಾರಕ್ಕೆ ಆಗುತ್ತಿರುವ ಅಡೆ ತಡೆಗಳನ್ನು ನಿವಾರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒ ತ್ತಾಯಿಸಿದರು. ವಿಎಚ್‌ಪಿ ಮತ್ತು ಬಜರಂಗದಳ ಪ್ರಮುಖರಾದ ಕಿಶೋರ್,ರಂಗನಾಥ್,ತಿಪ್ಪೇಶ್,ಗೌತಮ್ ಮತ್ತಿತರರು ಇದ್ದರು.