ಬಾಗಲಕೋಟೆ: ಸಹನೆ ಮತ್ತು ತಾಳ್ಮೆ ಮಹಿಳೆಯ ಅತಿದೊಡ್ಡ ಶಕ್ತಿಯಾಗಿದ್ದು, ಅವಿಭಕ್ತ ಕುಟುಂಬಗಳಿಗೆ ಮಾತೃತ್ವದ ಅಂತ;ಕರಣವೇ ಚೈತನ್ಯವಾಗಿದೆ ಎಂದು ಬಿ.ವ್ಹಿ.ವ್ಹಿ.ಸಂಘದ ಅಕ್ಕನ ರುದ್ರಬಳಗದ ಅಧ್ಯಕ್ಷೆ ರಾಜೇಶ್ವರಿ ಚರಂತಿಮಠ ಹೇಳಿದರು.
ಅವರು ನಗರದ ಬಿ.ವ್ಹಿ.ವ್ಹಿ.ಸಂಘದ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸೋಮವಾರ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಕುಟುಂಬದ ಖುಷಿಯೇ ತನ್ನ ಖುಷಿ ಎಂದು ಭಾವಿಸಿ ಸಹನೆ ತಾಳ್ಮೆಗಳಿಂದ ಕುಟುಂಬ ನಿರ್ವಹಣೆ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ತನ್ನ ಮಾತೃತ್ವದ ಅಂತ:ಕರಣದ ಶಕ್ತಿಯಿಂದ ಇಂದಿಗೂ ಅವಿಭಕ್ತ ಕುಟುಂಬಗಳಿಗೆ ಚೈತನ್ಯಶೀಲವಾಗಿದ್ದು ಮಹಿಳೆ, ಹಿಂದೂ ಸಂಸ್ಕೃತಿಯಲ್ಲಿ ಮಹಿಳೆಗೆ ವಿಶೇಷವಾದ ದೇವತೆ ಸ್ಥಾನ ನಿಡಲಾಗಿದೆ, ನಮ್ಮ ದೇಶದಲ್ಲಿ ಪಾಶ್ಚಾತ್ಯ ಸಂಸ್ಕೃತಿ ಪ್ರಭಾವವಿದ್ದರು ನಮ್ಮ ದೇಶದ ಮಹಿಳೆ ತನ್ನ ಒಡಲಶಕ್ತಿಯಿಂದ ತನ್ನ ಗೌರವಯುತ ಶ್ರೀಮಂತವಾದ ದೇಶಿಯ ಸಂಸ್ಕೃತಿ ಉಳಿಸಿಕೊಂಡಿದ್ದಾಳೆ, ಆಧುನಿಕ ಯುಗದ ಎಲ್ಲ ರಂಗದಲ್ಲೂ ಮಹಿಳೆ ಮುಂಚೂಣಿಯಲ್ಲಿದ್ದಾಳೆ, ಕುಟುಂಬದ ಆರೋಗ್ಯ, ಕುಟುಂಬದ ಸೌಂದರ್ಯ ಮನೆಯ ಅಡುಗೆಮನೆಯಲ್ಲಿ ಅಡಿಗಿದೆ, ಇಂದಿನ ವಿದ್ಯಾರ್ಥಿನಿಯರು ಮನೆಯ ಅಹಾರ ಪದಾರ್ಥಗಳನ್ನು ಬಳಸಬೇಕು ಅದರಲ್ಲಿ ಆರೋಗ್ಯ ಹಾಗೂ ಸೌಂದರ್ಯ ವರ್ಧಕ ಔಷಧಿ ಅಡಗಿದೆ ಎಂದರು.
ಮುಖ್ಯ ಅತಿಥಗಳಾಗಿ ಆಗಮಿಸಿ ಮಾತನಾಡಿ ಅಕ್ಕನ ಬಳಗದ ಅಧ್ಯಕ್ಷೆ ನಿರ್ಮಲಾ ಹಲಕುರ್ಕಿ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವುದರಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು, ಅನೇಕ ರಂಗಗಳಲ್ಲಿ ಸಾಧನೆ ಮಾಡುವ ಮೂಲಕ ಇಂದಿನ ಮಹಿಳೆ ಸಾಮಾನ್ಯರಲ್ಲ, ಅಸಾಮಾನ್ಯಳಾಗಿ ಹೊರಹೊಮ್ಮಿದ್ದಾಳೆ, ಶಿಕ್ಷಣ ಕಲಿಯುವ ಯುವ ವಿದ್ಯಾರ್ಥಿಗಳು ಮಹಿಳೆಯರಿಗೆ ದಾರಿದೀಪಗಳಾಬೇಕು, ಮಹಿಳೆ ಅಡುಗೆ ಮನೆಯಿಂದ ಅಂತರಿಕ್ಷದವರೆಗೆ ಸಾಗಿ ಎಲ್ಲರ ಬದುಕಿಗೆ ಸ್ಪೂರ್ತಿಯಾಗಿದ್ದಾಳೆ ಎಂದರು.
ಉಪನ್ಯಾಸ ನೀಡಿದ ಡಾ.ವಿಜಯಲಕ್ಷ್ಮೀ ಸಮಾನತೆಯೆ ಹೋರಾಟದಲ್ಲಿ ಮಹಿಳೆ ತನ್ನನ್ನು ತಾನೂ ಮರೆಯಬಾರದು, ಸ್ತ್ರೀ ಇಲ್ಲದೆ ಇಂದು ಭಾರತವಿಲ್ಲಾ, ಪ್ರಕೃತಿ ಸ್ತ್ರೀಯರಿಗೆ ತನ್ನದೆಯಾದ ಸೌಂದರ್ಯವನ್ನು ನೀಡಿದೆ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆ ಹಾಗೂ ಪುರುಷರ ಪಾತ್ರ ಬಹಳ ಮುಖ್ಯವಾಗಿದೆ ಎಂದರು. ಇನ್ನೋರ್ವ ಉಪನ್ಯಾಸಕಿ ಡಾ ಜಯಲಕ್ಷ್ಮೀ ಮಾತನಾಡಿ ಮಹಿಳೆಯರು ಹೋಮಿಯೋಪಥಿಕ್ ಸೌಂದರ್ಯ ವರ್ಧಕಗಳನ್ನು ಬಳಸುವಂತೆ ಸಲಹೆ ನೀಡಿದರು.
ಇದೆ ಸಂಧರ್ಭದಲ್ಲಿ ಪ್ರಾಚಾರ್ಯ ಡಾ.ಅರುಣ ಹೂಲಿ ಹೋಮಿಯೋಪಥಿ ಚಿಕಿತ್ಸಾ ಪದ್ದತಿ ಕುರಿತು ಮಾಹಿತಿ ನೀಡಿದರು. ನಗರಸಭೆ ಸದಸ್ಯೆ ಡಾ.ರೇಖಾ ಕಲಬುರ್ಗಿ, ಶೋಭಾ ರಾವ್ ,ಶಿವಲೀಲಾ ಪಟ್ಟಣಶಟ್ಟಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವೈದ್ಯ ವಿದ್ಯಾರ್ಥಿಗಳಾದ ವಿಜಯಲಕ್ಷ್ಮಿ ಹವಾಲ್ದಾರ, ವಾಣಿಶ್ರೀ ಗಚ್ಚಿನಕಟ್ಟಿ, ನೇಹಾ ಮಾಶ್ಯಾಳ ಪ್ರಾರ್ಥಿಸಿದರು, ಡಾ.ರವಿ.ಕೋಟೆಣ್ಣವರ ಸ್ವಾಗತಿಸಿದರು, ಡಾ.ಶ್ವೇತಾ ಪಾಟೀಲ ವಂದಿಸಿದರು, ಡಾ.ಕೀರ್ತಿ ಚಾವಡಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕರುಗಳಾದ ಡಾ.ವಿಜಯಲಕ್ಷ್ಮಿ.ಪೂಜಾರ. ಡಾ.ಸುಧೀರ ಬೇಟಗೇರಿ. ಡಾ.ಅಮರೇಶ ಬಳಗಾನೂರ ಇತರ ಭೋದಕ - ಭೋದಕೇತರ ಸಿಬ್ಬಂದಿ, ಅಕ್ಕನ ಬಳಗದ ಸದಸ್ಯೆಯರು, ವೈದ್ಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.