ಜಿಲ್ಲೆ

ಮಹಿಳೆಯ ತಲೆಗೆ ಹೊಡೆದು ಮಾಂಗಲ್ಯ ಸರ ಕಳವು

ಹುಲಿಯೂರುದುರ್ಗ: ಕುಣಿಗಲ್​ ತಾಲೂಕಿನ ಈಡಿಗರಪಾಳ್ಯದಲ್ಲಿ ಭಾನುವಾರ ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿದ ಖದೀಮರು ಮಹಿಳೆಯ ತಲೆಗೆ ಹೊಡೆದು ಮಾಂಗಲ್ಯ ಸರ ಕಳುವು ಮಾಡಿದ್ದಾರೆ. ಮಾರೇಗೌಡ ಅವರ ಪತ್ನಿ ರುಕ್ಮಿಣಿ(26) ಸರಕಳೆದುಕೊಂಡವರು. ಮುಂಜಾನೆ ಪಾತ್ರೆ ತೊಳೆದು ಮನೆಯೊಳಗೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಅಪರಿಚಿತ ತಲೆಗೆ ರಾಡ್​ನಿಂದ ಹೊಡೆದು ಮಾಂಗಲ್ಯ ಸರ ಕಳವು ಮಾಡಿದ್ದಾನೆ. ಈ ವೇಳೆ ಗಂಭೀರ ಗಾಯಗೊಂಡ ಮಹಿಳೆ ಚಿರಾಡುತ್ತ ಕಳಗೆ ಬಿದ್ದಿದ್ದು, ತಕ್ಷಣ ಪಕ್ಕದ ಮನೆಯವರು ಗಮನಿಸಿ ಮಾರೇಗೌಡ ಅವರ ಗಮನಕ್ಕೆ ತಂದು ಕುಣಿಗಲ್​ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಸಿಪಿಐ ನವೀನ್​ಗೌಡ, ಮಾಹಿತಿ ಪಡೆದು ತನಿಖೆ ಕೈಗೊಂಡಿದ್ದಾರೆ. ಘಟನೆಯ ಸ್ಥಳಕ್ಕೆ ಎ.ಎಸ್​.ಪಿ ಅಬ್ದುಲ್​ ಖಾದರ್​ ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ಕುಣಿಗಲ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಸ್​ ಕಳವು

ತುಮಕೂರು: ಮನೆಮುಂದೆ ನಿಲ್ಲಿಸಿದ್ದ ಬಸ್​ ಕಳ್ಳತನ ಮಾಡಿರುವ ಟನೆ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ತೋವಿನಕೆರೆ ಗ್ರಾಮದ ಸೈಯದ್​ಗೌಸ್​ ಎಂಬುವವರಿಗೆ ಸೇರಿದ್ದ ಬಸ್​ ಕಳ್ಳತನವಾಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಮೆಂರ್ಟ್ಸ್​ ಕೆಲಸಕ್ಕೆ ತೆರಳುವ ಕೆಲಸಗಾರರನ್ನ ಕರೆದೊಯ್ಯಲು ಸಾಲ ಮಾಡಿ ಬಸ್​ ತಂದಿದ್ದ ಮಾಲೀಕ ಸೈಯದ್​ಗೌಡ್​. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.