ಜಿಲ್ಲೆ

ಮಹಿಳೆಯ ಚಿನ್ನದ ಸರ ಕಿತ್ತು ಪರಾರಿ

ಮೈಸೂರು: ನಗರದ ಶ್ರೀರಾಂಪುರದಲ್ಲಿರುವ ಹಿಟ್ಟಿನ ಗಿರಣಿಯಿಂದ ಮನೆಗೆ ಬರುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ಖದೀಮ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಶ್ರೀರಾಂಪುರದ 2ನೇ ಹಂತದಲ್ಲಿರುವ ಮಧುವನ ಬಡಾವಣೆಯ ಕಮಲಾ(62) ಅವರ ಸುಮಾರು 2 ಲಕ್ಷ ರೂ. ಮೌಲ್ಯದ 30 ಗ್ರಾಂ ಚಿನ್ನದ ಸರ ಕಳ್ಳರ ಪಾಲಾಗಿದೆ.

ಮನೆಯ ಹತ್ತಿರದಲ್ಲಿರುವ ಗಿರಣಿಗೆ ಹೋಗಿ ಅಕ್ಕಿ ಮತ್ತು ಗೋಧಿ ಹಿಟ್ಟು ಮಾಡಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದರು. ಅಡ್ಡರಸ್ತೆಯಲ್ಲಿ ಸಾಗುವಾಗ ಹಿಂಬಾಲಿಸಿದ ಖದೀಮ, ಏಕಾಏಕಿ ಚಿನ್ನದ ಸರ ಕಿತ್ತುಕೊಂಡು ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದಾನೆ. ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.