ಮೈಸೂರು: ಸಿದ್ಧಾರ್ಥನಗರದ ಸೋಮವಾರ ಬೆಳಗ್ಗೆ ಜಿಮ್‌ನಿಂದ ವಾಪಸ್ ಆಗುತ್ತಿದ್ದ ಮಹಿಳೆಯ ಚಿನ್ನದ ಸರ ಕದಿಯಲು ಯತ್ನ ನಡೆದಿದೆ.
ಅನಿತಾ(55) ಅವರು ಬೆಳಗ್ಗೆ 6.30ರ ಹೊತ್ತಿಗೆ ಇಲ್ಲಿಯ ದಯಾ ಮಾರ್ಗದಲ್ಲಿರುವ ಜಿಮ್‌ಗೆ ತೆರಳಿ ವಾಪಸ್ ಮನೆಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಹಿಂದಿನಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ ಸರ ಕದಿಯಲು ಯತ್ನಿಸಿದ್ದಾರೆ.
ಮಹಿಳೆ ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರಿಂದ ಸರ ಕದಿಯಲು ಸಾಧ್ಯವಾಗಿಲ್ಲ. ಹೀಗಾಗಿ, ಅಲ್ಲಿಂದ ಪರಾರಿಯಾಗಿದ್ದಾರೆ.
ಆದರೆ, ಈ ಕುರಿತು ದೂರು ನೀಡದ ಕಾರಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.