ಜಿಲ್ಲೆ

ಮಹಿಳೆಗೆ ಅವಕಾಶ ಕೊಟ್ಟರೆ ಸಾಧಿಸಬಲ್ಲಳು

ಇಟಗಿ: ಮಹಿಳೆಯರಿಗೆ ಅವಕಾಶ ಕೊಟ್ಟಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಬಲ್ಲಳು ಎಂಬುದನ್ನು ಈಗಾಗಲೇ ತೋರಿಸಿ ಕೊಟ್ಟಿದ್ದಾಳೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಸಮೀಪದ ಬೀಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ಸಬಲೀಕರಣ ಘಟಕದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆಯರ ಪರಿಶ್ರಮ, ತ್ಯಾಗ, ಸಹನೆ ಗುರುತಿಸುವ ಜತೆ ಅವರನ್ನು ಗೌರವಿಸಿ, ಸಮಾನತೆಯಿಂದ ಕಾಣಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ನಾಸೀರಅಹ್ಮದ್ ಜಂಗುಬಾಯಿ ಮಾತನಾಡಿ, ಮಹಿಳೆಯರು ಎಲ್ಲ ರೀತಿಯಿಂದ ಸಶಕ್ತರಾದರೆ ಸಮಾಜ ಹಾಗೂ ದೇಶದ ಉನ್ನತಿ ಸಾಧ್ಯ ಎಂದರು.

ಸಿಡಿಸಿ ಕಮಿಟಿ ಸದಸ್ಯೆ ಡಾ.ಸವಿತಾ ಜವಳಿ ಉದ್ಘಾಟಿಸಿದರು. ಸಂತೋಷ ಕಾಶಿಲಕರ, ಶಾಂತಾ ಕುಂದೇಕರ, ನಾಗೇಂದ್ರ ಚೌಗಲಾ, ಕೇದಾರಲಿಂಗ ಸಂಭೋಜಿ, ಮಹಿಳಾ ವೇದಿಕೆ ಸಂಚಾಲಕಿ ಡಾ. ವಿಜಯಲಕ್ಷ್ಮಿ ನಾಯಕ, ಮಂಜುಳಾ ಅಣಜಿ, ಕೆ.ಸಿ. ಕಾಂಬಳೆ, ವೀರನಗೌಡ ಪಾಟೀಲ ಇದ್ದರು.