ಜಿಲ್ಲೆ

ಮಹಿಳೆ ತನ್ನ ಶಕ್ತಿಯನ್ನು ಸದ್ವಿನಿಯೋಗ ಮಾಡಿಕೊಳ್ಳಲಿ:ಎಂ.ಬಿ.ಗಿರಿಜಾಂಬಿಕಾ

ಹಾಸನ: ಮಹಿಳೆರು ತನ್ನ ಶಕ್ತಿಯನ್ನು ಸದುಪಯೋಗ ಪಡಿಸಿಕೊಂಡು ಸತ್ಕಾರ್ಯಗಳಿಗೆ ಬಳಕೆ ಮಾಡಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕೆಂದು ವಕೀಲೆ ಹಾಗೂ ಹಸಿರು ಭೂಮಿ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಬಿ.ಗಿರಿಜಾಂಬಿಕಾ ಅವರು ಕರೆ ನೀಡಿದರು.

ಹಾಸನ ಕ್ಲಬ್ ಲೇಡೀಸ್ ವಿಂಗ್ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಪರಿಸರಕ್ಕೆ ಪೂರಕವಾದ ಜೀವನಶೈಲಿಯನ್ನು ಸಹ ರೂಡಿಸಿಕೊಂಡು ಮುಂದಿನ ಪೀಳಿಗೆಗೆ ಈ ಭೂಮಿಯನ್ನು ವರ್ಗಾಯಿಸುವ ಜವಾಬ್ದಾರಿಯನ್ನು ಸಹ ನಿಭಾಯಿಸಬೇಕಿದೆ ಎಂದು ಕರೆ ನೀಡಿದರು.

ಹಾಸನ ಕ್ಲಬ್ ಲೇಡಿಸ್ ವಿಂಗ್ ಅಧ್ಯಕ್ಷೆ ಶೋಭಾ ಮಹೇಶ್ ಮಾತನಾಡಿ, ಮಹಿಳೆಯರು ಕಾನೂನುಗಳನ್ನು ತಿಳಿದುಕೊಂಡು ಅವುಗಳ ಸದ್ಬಳಕೆ ಮಾಡಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಆಶಾದೇವಿ ಕುಮಾರ್, ಉಪಾಧ್ಯಕ್ಷೆ ಡಾ. ಕವಿತಾ ಗಿರೀಶ್, ಖಜಾಂಚಿ ಉಷಾ ಮಹೇಶ್, ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಹಾಜರಿದ್ದರು.