ಚಿಕ್ಕಮಗಳೂರು: ಮಹಿಳೆಯರು ಸ್ವಾಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಆರ್ಥಿಕ ನೆರವು ಅನಿವಾರ್ಯ. ಮಹಿಳಾ ಸೊಸೈಟಿ ಮಹಿಳಾ ಸಬಲೀಕರಣಕ್ಕೆ ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ಸಂಘದ ಅಧ್ಯಕ್ಷೆ ಲಕ್ಷಿö್ಮÃ ನಂಜಯ್ಯ ಅಭಿಪ್ರಾಯಪಟ್ಟರು.
ನಗರದ ಕೋಟೆ ಅಗ್ರಹಾರ ರಸ್ತೆಯ ಚಿಕ್ಕಮಗಳೂರು ತಾಲೂಕು ಮಹಿಳಾ ವಿವಿದೊz್ದೆÃಶ ಸಹಕಾರ ಸಂಘದ ೨೦೨೪-೨೫ನೆಯ ಸಾಲಿನ ಸರ್ವಸದಸ್ಯರ ವಾಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋಟೆಯಲ್ಲಿರುವ ಏಕೈಕ ಮಹಿಳಾ ಸೊಸೈಟಿ ಇದಾಗಿದ್ದು, ಇದನ್ನು ಉಳಿಸಿಕೊಳ್ಳುವುದರ ಜೊತೆಗೆ ಸದೃಢಗೊಳಿಸುವುದು ನಮ್ಮೆಲ್ಲರ ಮೇಲಿನ ಹೊಣೆಗಾರಿಕೆಯಾಗಿದೆ. ಠೇವಣಿ ಜೊತೆಗೆ ಆರ್.ಡಿ.ಯನ್ನು ನೀಡುವ ಮೂಲಕ ಸದಸ್ಯರು ಸಹಕಾರ ನೀಡಬೇಕು ಎಂದು ಮನವಿ ಮಡಿದರು.
ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು ಕಾಲ ಕಾಲಕ್ಕೆ ಕಂತು ಮತ್ತು ಬಡ್ಡಿಯನ್ನು ಮರು ಪಾವತಿಸುವ ಮೂಲಕ ಸಂಘದ ಬೆಳವಣಿಗೆಗೆ ಸದಸ್ಯರು ನೆರವಾಗಬೇಕು. ಎರಡರಿಂದ ಎಂಟು ವರ್ಷಗಳವರೆಗೂ ಸುಸ್ತಿದಾರರಾದ ೩೨ಸದಸ್ಯರ ಪಟ್ಟಿ ಸಿದ್ಧಪಡಿಸಿ ಅವರ ಮನೆ ಬಾಗಿಲಿಗೆ ಸ್ವತಃ ತೆರಳಿ ಮನವೊಲಿಸುವ ಪ್ರಯತ್ನ ನಡೆಸಿದ್ದು, ೧೬ ಜನರಿಂದ ೧.೨೪ಲಕ್ಷ ರೂ. ವಾಸೂಲಾತಿ ಮಾಡಲಾಗಿದೆ. ಒಂದು ವರ್ಷದ ಆರ್.ಡಿ.ಗೆ ಶೇ.೪ ಬಡ್ಡಿ ನೀಡುತ್ತಿದ್ದು ಈಗ ಮೂರುವರ್ಷಕ್ಕೆ ಶೇ. ೫ರಬಡ್ಡಿ ನೀಡಲಾಗುತ್ತಿದೆ. ಅದೇ ರೀತಿ ಠೇವಣಿಯ ಬಡ್ಡಿದರವನ್ನು ಶೇ. ೫ ರಿಂದ ೬.೫ಕ್ಕೆ ಹೆಚ್ಚಿಸಲಾಗಿದೆ. ಸದಸ್ಯರು ಇದರ ಲಾಭ ಪಡೆಯಬೇಕು ಎಂದು ಹೇಳಿದರು.
ಆರಂಭದಲ್ಲಿ ೧೦೦ರೂ. ಮುಖಬೆಲೆಯ ಷೇರಿನೊಂದಿಗೆ ಸದಸ್ಯರಾದವರು ೧೦ಷೇರು ಖರೀದಿಸಿ ಕನಿಷ್ಟ ಒಂದು ಸಾವಿರ ರೂ.ಮೌಲ್ಯದ ಷೇರು ಹೊಂದುವ ಮೂಲಕ ಮುಂದುವರೆಯಬೇಕೆAದು ಸಂಘದ ಬೈಲಾದಲ್ಲಿ ಈಗಾಗಲೇ ತಿದ್ದುಪಡಿ ಮಾಡಲಾಗಿದೆ. ಕಡಿಮೆ ಮೊಬಲಗಿನ ಷೇರು ಹೊಂದಿರುವವರಿಗೆ ಈಗಾಗಲೇ ವೈಯಕ್ತಿವಾಗಿ ನೋಟಿಸ್ ನೀಡಲಾಗಿದೆ. ಮಹಾಸಭೆಯಲ್ಲೂ ತಿಳಿವಳಿಕೆ ನೀಡಲಾಗಿದೆ. ವ್ಯತ್ಯಾಸ ಷೇರು ಮೊತ್ತವನ್ನು ಪಾವತಿಸದಿದ್ದರೆ ಸರ್ಕಾರವೇ ಅನರ್ಹಗೊಳಿಸುತ್ತದೆ. ೨೦ ದಿನದೊಳಗಾಗಿ ಪೂರ್ಣ ಹಣ ಪಾವತಿಸಬೇಕು ಇಲ್ಲದಿದ್ದರೆ ಇರುವ ಹಣವನ್ನು ವಾಪಾಸ್ಸು ಪಡೆಯಬೇಕು. ಆದಾಗದಿದ್ದರೆ ಅವರ ಷೇರು ಮೊಬಲಗನ್ನು ಹಿಂತಿರುಗಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಲ್ಲ ಸದಸ್ಯರು ಸಂಘದಲ್ಲಿ ವ್ಯವಹರಿಸಬೇಕು. ಇತರರನ್ನೂ ಕರೆ ತರಬೇಕು. ಸಂಘಕ್ಕೆ ಯಾವುದೇ ರೀತಿಯಲ್ಲಿ ಸ್ಪಂದಿಸದ ೪೫ರಿಂದ ೫೦ಜನರ ಷೇರನ್ನು ವಾಪಾಸ್ ಮಾಡಲಾಗಿದೆ. ೬೦ಜನರ ನವೀಕರಣ ಆಗಿದೆ. ೨೩ ಹೊಸ ಷೇರುದಾರರನ್ನು ಕರೆ ತರಲಾಗಿದೆ. ಎಲ್ಲರೂ ಕೈಜೋಡಿಸಿದಾಗ ಸಹಜವಾಗಿ ಅಭಿವೃದ್ಧಿ ವೇಗಗೊಳ್ಳುತ್ತದೆ ಎಂದರು.
ಇದೇ ವೇಳೆ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಆರ್‌ಡಿ ಮತ್ತು ಎಫ್‌ಡಿ ಮಾಡಿದ ಸದಸ್ಯರಿಗೆ ನೆನಪಿನಕಾಣಿಕೆ ನೀಡಲಾಯಿತು. ನಿರ್ದೇಶಕರಾದ ಜಯಶೀಲಾ, ನೇತ್ರಾ ವೆಂಕಟೇಶ್, ಜಯಶ್ರೀ ಅಂಥೋಣಿ, ಶೀಲಾ ಉಪಸ್ಥಿತರಿದ್ದರು.