filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: off;albedo: ;confidence: ;motionLevel: -1;weatherinfo: null;temperature: 41; 
ಜಿಲ್ಲೆ

ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ

ಹಾಸನ: ನಗರದ ಆರ್‌ಸಿ ರಸ್ತೆ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಬೃಹತ್ ಆರೋಗ್ಯ ತಪಾಸಣೆ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ, ಶ್ರೀ ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ, ಅಮ್ಮ ಕಣ್ಣಿನ ಆಸ್ಪತ್ರೆ, ಹಾಸನಾಂಬ ದಂತ ವೈದ್ಯಕೀಯ ಕಾಲೇಜು, ಥೈರೋಕೆರ್ ಹಾಸನ ಹಾಗೂ ಜೀವಾ ರಕ್ಷಾ ರಕ್ತ ನಿಧಿ ಸಹಯೋಗದಲ್ಲಿ ದಂತ ತಪಾಸಣೆ, ಥೈರಾಯ್ಡ ತಪಾಸಣೆ, ನೇತ್ರ ತಪಾಸಣೆ, ರಕ್ತದ ಗುಂಪು ಪತ್ತೆ ಹಾಗೂ ಔಷಧ ವಿತರಣೆ ನಡೆಸಲಾಯಿತು. ಕಾಲೇಜಿನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಅಮ್ಮ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ ಡಾ. ಸಂದೀಪ್ ಮಾತನಾಡಿ, ಕಣ್ಣು ಮೆದುಳಿನ ಒಂದು ಭಾಗ. ವಯೋಸಹಜವಾಗಿ ಕಣ್ಣಿನ ಪೊರೆ ಪ್ರಾಣಿ, ಪಕ್ಷಿಗಳು ಸೇರಿದಂತೆ ಮನುಷ್ಯರಿಗೂ ಬರುತ್ತದೆ. ವೈಜ್ಞಾನಿಕ ದೃಷ್ಟಿಕೋನದತ್ತ ಆಲೋಚಿಸಿ ಮಾನವ ತನ್ನ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಸೇವಾ ಮನೋಭಾವನೆ ಹೊಂದಬೇಕು. ಬಡವರಿಗೆ ಆರೋಗ್ಯ ತಪಾಸಣೆ ಮಾಡುವುದು ಪುಣ್ಯದ ಕೆಲಸ. ತಮ್ಮ ಅಮ್ಮ ಕಣ್ಣಿನ ಆಸ್ಪತ್ರೆಯ ವತಿಯಿಂದ ಬಡವರಿಗೆ ಉಚಿತ ಕಣ್ಣಿನ ಚಿಕಿತ್ಸೆ ಮಾಡಿಕೊಡುವ ಆಶ್ವಾಸನೆ ನೀಡಿದರು.

ಜೀವ ರಕ್ಷಕ ರಕ್ತ ನಿಧಿ ಸಂಸ್ಥೆಯ ಮೋಹನ್ ಮಾತನಾಡಿ, ರಕ್ತದಾನ ಎಂಬುದು ಒಂದು ಸರಳ ಪ್ರಕ್ರಿಯೆ. ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಹಾಗೂ 80 ರಷ್ಟು ಹೃದಯಾಘಾತ ಆಗುವುದಿಲ್ಲ. ಒಬ್ಬ ಮನುಷ್ಯ 40 ಬಾರಿ ರಕ್ತದಾನ ಮಾಡಿದರೆ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಆರೋಗ್ಯಯುತ ವ್ಯಕ್ತಿಗಳು 18 ವರ್ಷದಿಂದ ಮೇಲ್ಪಟ್ಟ, 45 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿರುವವರು ರಕ್ತದಾನ ಮಾಡಬಹುದು. ರಕ್ತದಾನ ಮಾಡುವ ಮೂಲಕ ಇನ್ನೊಂದು ಜೀವವನ್ನು ಉಳಿಸಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ ಮಂಜಯ್ಯ ಮಾತನಾಡಿ, ಮಾನವ ದೇಹದಲ್ಲಿ ಹಲವು ಸಮಸ್ಯೆಗಳಿದ್ದರೂ, ಅವು ನಮ್ಮ ಅರಿವಿಗೆ ಬರುವುದಿಲ್ಲ. ಆರೋಗ್ಯದ ವಿಚಾರವಾಗಿ ಅಸಡ್ಡೆ ಬೇಡ, ಜಾಗೃತರಾಗಿರಿ. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ತಮ್ಮಲ್ಲಿರುವ ಸಮಸ್ಯೆಗಳಿಗೆ ವೈದ್ಯರಲ್ಲಿ ಮುಕ್ತವಾಗಿ ಚಿಕಿತ್ಸೆ ಪಡೆದು ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಕಾಲೇಜಿನ ಸುಮಾರು 25ಕ್ಕೂ ಅಧಿಕ ಯುವತಿಯರು ಹಾಗೂ ಅಧ್ಯಾಪಕರು ರಕ್ತದಾನ ಮಾಡಿದರು. ಇದಲ್ಲದೇ 600ಕ್ಕೂ ಅಧಿಕ ಮಂದಿ ವಿದ್ಯಾರ್ಥಿನಿಯರು ವಿವಿಧ ತಪಾಸಣೆ ಮಾಡಿಸಿಕೊಂಡರು.

ಈ ವೇಳೆ ರೋಟರಿ ಅಂತಾರಾಷ್ಟ್ರೀಯ ವಲಯ 9ಎ ನ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಸಂತೋಷ್, ರೋಟರಿ ವಲಯ ಸೇನಾನಿ ಡಾ. ಬಿ. ವಿಕ್ರಮ್, ಧರ್ಮಸ್ಥಳ ಆಯುರ್ವೇದ ಆಸ್ಪತ್ರೆ ವೈದ್ಯೆ ಪ್ರತಿಮಾ, ಥೈರೋ ಕೇರ್ ಸೆಂಟರ್‌ನ ರೋಹಿತ್, ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ ಅಧ್ಯಕ್ಷ ಯು.ವಿ. ಸಚಿನ್, ಕಾರ್ಯದರ್ಶಿ ಪುನೀತ್, ಖಜಾಂಚಿ ಪಿ.ರವಿ ಕುಮಾರ್, ಸದಸ್ಯರಾದ ಎಸ್.ಯೋಗೇಶ್, ಎಚ್.ಕೆ.ದಿಲೀಪ್ ಕುಮಾರ್, ಆರ್. ಯೋಗೇಶ್, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ.ಸಿ.ಎಲ್. ಶಿವಕುಮಾರ್, ಐಕ್ಯೂಎಸಿ ಸಂಚಾಲಕ ಮೋಹನ್ ಕುಮಾರ್, ಉಪನ್ಯಾಸಕ ಕೆ.ಸಿ. ನವೀನ್, ಅಧ್ಯಾಪಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.