ಜಿಲ್ಲೆ

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉದ್ಯೋಗ ಮೇಳ

ಹಾಸನ: ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಜರ್ಮನ್ ಮೂಲದ ರ‌್ಯಾಂಡ್‌ಸ್ಟಡ್ ಕಂಪನಿಯವರು ಉದ್ಯೋಗ ಮೇಳವನ್ನು ಪ್ರಾಂಶುಪಾಲೆ ಡಾ.ಕೆ.ಜಿ.ಕವಿತಾ, ರ‌್ಯಾಂಡ್‌ಸ್ಟಡ್ ಕಂಪನಿಯ ಸಿನಿಯರ್ ರಿಜಿನಲ್ ಡಿಲಿವರಿ ಮ್ಯಾನೇಜರ್ ಎನ್.ಕೃಷ್ಣಮೂತಿ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಡಾ.ಕೆ.ಜಿ.ಕವಿತಾ ಮಾತನಾಡಿ, ವ್ಯಾಸಂಗ ಮುಗಿದ ಮೇಲೆ ಉದ್ಯೋಗಕ್ಕಾಗಿ ಅಲೆದಾಡಬೇಕು. ಆದರೆ ಈಗ ಉದ್ಯೋಗ ನೀಡಲು ಕಂಪನಿಯೇ ನಿಮ್ಮ ಬಳಿ ಬಂದಿದ್ದು, ಅದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಂತರ ಮಹಿಳಾ ಕಾಲೇಜಿನ ಉದ್ಯೋಗ ಮಾಹಿತಿ ಘಟಕದ ಸಂಚಾಲಕ ಜಿ.ಜಿ. ರಾಜಶೇಖರ್ ಮಾತನಾಡಿ, ಇತ್ತೀಚೆಗೆ ಕೆಲಸ ಸಿಗುವುದು ತುಂಬ ಕಷ್ಟವಾಗಿದೆ. ಅವಕಾಶಗಳು ಕಡಿಮೆ ಇದ್ದು, ಅವಕಾಶ ಸಿಕ್ಕಿದಾಗ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಕಳೆದ ಭಾರಿ ಉದ್ಯೋಗ ಮೇಳದಲ್ಲಿ ಒಟ್ಟು 44 ಮಂದಿ ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದರು ಎಂದ ಅವರು, ರ‌್ಯಾಂಡ್‌ಸ್ಟಡ್ ಕಂಪನಿಯವರು ವಿಶ್ವದಾದ್ಯಂತ ಉದ್ಯೋಗಿಗಳನ್ನು ಹೊಂದಿದೆ. ದೇಶದಲ್ಲಿಯೇ 70 ಸಾವಿರಕ್ಕೂ ಹೆಚ್ಚು ಮಂದಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರ‌್ಯಾಂಡ್‌ಸ್ಟಡ್ ಕಂಪನಿಯ ಅನಿಲ್ ಕುಮಾರ್ ಮತ್ತು ರಾಜೇಶ್, ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಪಿ.ಪೂರ್ಣಿಮ , ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಿ.ಶಂಕರ್ ರೆಡ್ಡಿ, ವಿ.ಭಾಸ್ಕರ್, ಎಚ್.ಎನ್.ಮಧುಸೂದನ್, ಎನ್.ಪಿ.ಮೋಹಿನ್ ಕುಮಾರ್,ಡೇವಿಡ್ ಕುಮಾರ್ ಹಾಗೂ ಇತರರು ಇದ್ದರು.