ಹುಣಸಗಿ: ಪಟ್ಟಣದ ವಾರ್ಡ್ ನಂ.೧೨ರಲ್ಲಿ ಸಾರ್ವಜನಿಕ ಮಹಿಳಾ ಶೌಚಗೃಹ ನಿರ್ಮಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದರು. ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ೩೦ ವರ್ಷಗಳಿಂದ ಶೌಚಗೃಹ ಇಲ್ಲದೆ ಬಯಲನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ಕೂಡಲೇ ಶೌಚಗೃಹವನ್ನು ನಿರ್ಮಿಸಿ ಮಹಿಳೆಯರ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ದಲಿತ ಯುವ ಮುಖಂಡ ಸಿದ್ದು ಭಾವಿಮನಿ ಮಾತನಾಡಿ, ಶೌಚಗೃಹ ಸೇರಿದಂತೆ ವಾರ್ಡ್ಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ಶೌಚಗೃಹ ಇಲ್ಲದ ಕಾರಣ ರಸ್ತೆ ಬದಿ ಹೋಗುವಂತಾಗಿದೆ. ಅದರಲ್ಲಿಯೂ ರಾತ್ರಿ ವೇಳೆ ಹೋಗಬೇಕು ಇದರಿಂದ ಮಹಿಳೆಯರು ತೀವ್ರ ಮುಜುಗರಕ್ಕೆ ಒಳಗಾಗುತ್ತಿದ್ದು, ಕೂಡಲೇ ಸಾರ್ವಜನಿಕ ಮಹಿಳಾ ಶೌಚಗೃಹ ನಿರ್ಮಿಸಬೇಕು. ಹಾಗೊಂದು ವೇಳೆ ವಿಳಂಬ ಮಾಡಿದ್ದಲ್ಲಿ ಮಹಿಳೆಯರೊಂದಿಗೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು. ತಿಪ್ಪಣ್ಣ ಬೇವಿನಗಿಡ, ಬಸಪ್ಪ ಬೇವಿನಗಿಡ, ಮಲಕಮ್ಮ, ಶಾಂತಮ್ಮ ಸೌಭಾಗ್ಯಮ್ಮ, ಮಲ್ಲಮ್ಮ ಧರ್ಮಣ, ಮಲ್ಲಮ್ಮ ಇತರರಿದ್ದರು.