ಹಟ್ಟಿಚಿನ್ನದಗಣಿ: ಪಟ್ಟಣದ 4ನೇ ವಾರ್ಡಿನಲ್ಲಿ ಮಹಿಳೆಯರ ಸಾರ್ವಜನಿಕ ಶೌಚಗೃಹ ನಿರ್ಮಾಣವಾಗಿ ಮೂರು ವರ್ಷಗಳಾದರೂ ಉದ್ಘಾಟನೆಯಾಗಿಲ್ಲ. ಪಪಂನಿಂದ ನಗರೋತ್ಥಾನ ಹಂತ 3ರ ಅನುದಾನದಲ್ಲಿ ಶೌಚಗೃಹ ನಿರ್ಮಿಸಲಾಗಿದೆ. ಕಟ್ಟಡಕ್ಕೆ ಇದುವರೆಗೆ ನೀರು ಮತ್ತು ವಿದ್ಯುತ್ ಸೌಲಭ್ಯ ಕಲ್ಪಿಸಿಲ್ಲ. ಇದರಿಂದಾಗಿ ಮಹಿಳೆಯರಿಗೆ ಬಯಲು ಬಹಿರ್ದೆಸೆ ಅನಿವಾರ್ಯವಾಘಿದೆ. ಇದೀಗ ಶೌಚಗೃಹದ ಸುತ್ತ ಗಿಡ-ಗಂಟಿಗಳು ಬೆಳೆದಿವೆ. ವಿಷಕಾರಿ ಪ್ರಾಣಿಗಳು ಸೇರಿಕೊಂಡಿವೆ.