ಜಿಲ್ಲೆ

ಮಹಿಳಾ ವಿವಿಯ ವಾರ್ಷಿಕ ದಿನಾಚರಣೆ

ಗಿರೀಶ ಸಗರ

ವಿಜಯಪುರ : ನಗರ ಹೊರ ವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನೂತನ ಡಾ. ಬಿ.ಆರ್​. ಅಂಬೇಡ್ಕರ್​ ಸಭಾಂಗಣದಲ್ಲಿ ಜು. 16 ರಂದು ಬೆಳಗ್ಗೆ 10:30ಕ್ಕೆ ವಾರ್ಷಿಕ ದಿನಾಚರಣೆ&2025 ಕಾರ್ಯಕ್ರಮ ನಡೆಯಲಿದೆ.

ವಿದ್ಯಾರ್ಥಿನಿ ೇಮಪಾಲನ ನಿರ್ದೇಶನಾಲಯ, ಕ್ರೀಡಾ ನಿರ್ದೇಶನಾಲಯ ಹಾಗೂ ವಸತಿ ನಿಲಯಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಮುಖ್ಯ ಅತಿಥಿಗಳಾಗಿ ನಿವೃತ್ತ ಹಿರಿಯ ಐಎಎಸ್​ ಅಧಿಕಾರಿ, ಮಹಿಳಾ ವಿವಿಯ ಸಂಸ್ಥಾಪಕ ಮಾಜಿ ವಿಶೇಷಾಧಿಕಾರಿ ಡಾ. ಎಸ್​.ಎಂ. ಜಾಮದಾರ, ಶಿವಮೊಗ್ಗ ಕುವೆಂಪು ವಿವಿಯ ಕನ್ನಡ ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಹಾಗೂ ಉಪ ಪೊಲೀಸ್​ ವರಿಷ್ಠಾಧಿಕಾರಿ ಬಸವರಾಜ ಯಲಿಗಾರ ಆಗಮಿಸುವರು. ಮಹಿಳಾ ವಿವಿಯ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಅಧ್ಯಕ್ಷತೆ ವಹಿಸುವರು.

ಮಹಿಳಾ ವಿವಿಯ ಸಿಂಡಿಕೇಟ್​ ಸದಸ್ಯೆ ಡಾ. ರಿಹಾನಾ ಜಬೀನ್​ ಸೇರದಂತೆ ಮುಂತಾದವರು ಉಪಸ್ಥಿತಿ ವಹಿಸುವರು ಎಂದು ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.