ಜಿಲ್ಲೆ

ಮಹಿಳಾ ವಿವಿ ಸಿಂಡಿಕೇಟ್ ಸದಸ್ಯರಾಗಿ ಜೋಶಿ

ಬೀದರ್: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿ ಇಲ್ಲಿಯ ಇಂಡಿಯನ್ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಸಾರಂಗಪಾಣಿ ಆರ್. ಜೋಶಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ವಿಶ್ವವಿದ್ಯಾನಿಲಯದ ಕುಲಪತಿ ಅನುಮೋದನೆ ಮೇರೆಗೆ ಕುಲಸಚಿವರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಜೋಶಿ ಅವರ ಅಧಿಕಾರ ಅವಧಿ ಒಂದು ವರ್ಷ ಇಲ್ಲವೇ ಮುಂದಿನ ಆದೇಶದ ವರೆಗೆ ಇರಲಿದೆ.