ಜಿಲ್ಲೆ

ಮಹಿಳಾ ಮೀಸಲಿಗೆ ಬಿಜೆಪಿ ಸಂಭ್ರಮಾಚರಣೆ

ಕಲಬುರಗಿ: ಸಂಸತ್‌ನಲ್ಲಿ ಮಹಿಳಾ ಮೀಸಲು ಮಸೂದೆ ಮಂಡಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಕಲಬುರಗಿಯಲ್ಲಿ ಬುಧವಾರ ವಿಜಯೋತ್ಸವ ನಡೆಸಿದರು. ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಮಹಾದೇವ ಬೆಳಮಗಿ, ಉಮೇಶ ಪಾಟೀಲ್, ಶಿವಾ ಅಷ್ಟಗಿ, ಶಶಿಕಲಾ ಟೆಂಗಳಿ, ಶೋಭಾ ಬಾಣಿ, ಭಾಗೀರಥಿ ಗುನ್ನಾಪುರ, ಮಹಾದೇವಿ ಕೆಸರಟಗಿ ಇತರರಿದ್ದರು.