ಬಾಗಲಕೋಟೆ: ಜಿಲ್ಲಾಡಳಿತ ಭವನದ ಆವರಣದಲ್ಲಿ ಹೊಸದಾಗಿ ಪ್ರಾರಂಭಿಸಲಾದ ಸಂಗಮೇಶ್ವರ ಸಂಜೀವಿನಿ ಮಹಿಳಾ ಕ್ಯಾಂಟೀನ್‍ಗೆ ಜಿಲ್ಲಾ ಪಂಚಾಯತ ಸಿಇಓ ಶಶೀಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ. ಮುಖ್ಯ ಯೋಜನಾಧಿಕಾರಿ ಪುನಿತ್, ಯೋಜನಾಧಿಕಾರಿ ಎನ್.ವಾಯ್.ಬಸರಿಗಿಡದ ಭೇಟಿ ನೀಡಿ ಉಪಹಾರ ಸವಿದರು.
ಜಿಲ್ಲಾ ಪಂಚಾಯತ ವತಿಯಿಂದ ಎನ್.ಆರ್.ಎಲ್.ಎಂ ಯೋಜನೆಯಡಿ ಸ್ವಯಂ ಉದ್ಯೋಗ ಕೈಗೊಳ್ಳಲು 2 ಲಕ್ಷ ರೂ.ಗಳನ್ನು ಗದ್ದನಕೇರಿಯ ಲಕ್ಷ್ಮೀ ಸ್ತ್ರೀಶಕ್ತಿ ಸ್ವ-ಸಹಾಯ ಸಂಘಕ್ಕೆ ನೀಡಲಾಗಿದೆ. ಈ ಹಣದಲ್ಲಿ ಸಂಗಮೇಶ್ವರ ಸಂಜೀವನಿ ಕ್ಯಾಂಟೀನ್ ಪ್ರಾರಂಭಿಸಲು ನೆರವು ದೊರೆತಂತಾಗಿದೆ ಎಂದು ಸಿಇಓ ಶಶೀಧರ ಕುರೇರ ತಿಳಿಸಿದರು.
ಕಳೆದ 2-3 ದಿನದಿಂದ ಪ್ರಾರಂಭವಾದ ಕ್ಯಾಂಟೀನ್‍ಗೆ ಭೇಟಿ ನೀಡಿದ ಅಧಿಕಾರಿಗಳು ಉಪಹಾರ ಸೇವಿಸುವ ಮೂಲಕ ಅವರಲ್ಲಿ ಮತ್ತಷ್ಟು ಸ್ಪೂರ್ತಿ ತುಂಬಿದರು. ಅಲ್ಲದೇ ವ್ಯಾಪಾರ ವಹಿವಾಟಿನ ಮಾಹಿತಿಯನ್ನು ಪಡೆದುಕೊಂಡರು. ಕ್ಯಾಂಟೀನ್‍ನಲ್ಲಿ ಲಭ್ಯವಿರುವ ಉಪಹಾರಗಳ ಮಾಹಿತಿಯನ್ನು ಪಡೆದುಕೊಂಡ ಅವರು ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಕ್ಯಾಂಟೀನ್ ನಡೆಸುವ ಮಹಿಳಾ ಸಂಘದ ಸದಸ್ಯೆ ಸ್ಮೀತಾ ಅವರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮ ಉಕ್ಕಲಿ, ನಗರಸಭೆ ಪೌರಾಯುಕ್ತ ರಮೇಶ ಜಾದವ, ಜಿ.ಪಂ ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಇದ್ದರು.