ಜಿಲ್ಲೆ

ಮಹಾಸಭೆ ಕಾಂಗ್ರೆಸ್ ಪಕ್ಷಕ್ಕೆ ಸೀಮಿತವಲ್ಲ

ಕಲಬುರಗಿ: ವೀರಶೈವ ಲಿಂಗಾಯತರಿಗೆ ಧಕ್ಕೆ ಬಂದಾಗ ಧ್ವನಿ ಎತ್ತುವ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗೆ ಜೀವ ಬೆದರಿಕೆ ಬಂದಿದ್ದು, ಅದರ ವಿರುದ್ಧ ಧ್ವನಿ ಎತ್ತಬೇಕಾಗಿದ್ದ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಶರಣು ಮೋದಿ ಶ್ರೀಗಳ ಹೆಸರು ಕೈಬಿಟ್ಟು ಮನವಿ ಸಲ್ಲಿಸಿದ್ದನ್ನು ಸಮಾಜದ ಹಿರಿಯ ಮುಖಂಡ ಸುಭಾಷ ಬಿರಾದಾರ ಕಮಲಾಪುರ ಖಂಡಿಸಿದ್ದಾರೆ.

ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದುವಿರೋಧಿ ಧೋರಣೆ ತೋರುತ್ತಿದೆ. ಅದಕ್ಕೆ ಮಹಾಸಭೆ ಜಿಲ್ಲಾಧ್ಯಕ್ಷ ಶರಣು ಮೋದಿ ಏಕಪಕ್ಷೀಯವಾಗಿ ವರ್ತಿಸುತ್ತಿದ್ದು, ರಕ್ಷಣೆ ನೀಡುವ ಮನವಿ ಪತ್ರ ಕೊಡುವಾಗ ಅದರಲ್ಲೂ ಚಂದು ಪಾಟೀಲ್ ಹೆಸರು ಉಲ್ಲೇಖಿಸಿ, ಸ್ವಾಮೀಜಿಗಳ ಹೆಸರು ಕೈ ಬಿಟ್ಟಿದ್ದು ಸಲ್ಲದು. ಇದು ಅವರ ಯೋಗ್ಯತೆ ಪ್ರಶ್ನೆ ಮೂಡಿಸುತ್ತದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.

ಜಿಲ್ಲಾಧ್ಯಕ್ಷರ ವರ್ತನೆಯಿಂದ ಸಂಘಟನೆಯ ಉz್ದೆÃಶಕ್ಕೆ ಧಕ್ಕೆ ಬಂದಿದೆ. ಕೂಡಲೇ ಜಿಲ್ಲಾಧ್ಯಕ್ಷರು ತಪ್ಪು ತಿದ್ದಿಕೊಂಡು ಪೂಜ್ಯರ ಪರ ನಿಲ್ಲಬೇಕು. ಇಲ್ಲದಿದ್ದರೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಅನರ್ಹನಿz್ದÉÃನೆ ಎಂದು ಅಧಿಕಾರದಿಂದ ಕೆಳಗೆ ಇಳಿಯಬೇಕು. ತಪ್ಪು ತಿದ್ದಿಕೊಳ್ಳದಿದ್ದರೆ ಮೋದಿಯನ್ನು ಉಚ್ಛಾಟಿಸುವಂತೆ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರಿಗೆ ಮನವಿ ಮಾಡಲಾಗುವುದು. ಎಲ್ಲ ಪಕ್ಷದವರ ಸಮ್ಮತಿಯಿಂದ ಜಿಲ್ಲಾಧ್ಯಕ್ಷರಾಗಿದ್ದು, ಬೆನ್ನಿಗೆ ನಿಂತು ರಕ್ಷಣೆ ನೀಡಲಿ ಎಂದು ಸಲಹೆ ನೀಡಿದರು.

ಮಹಾಸಭೆ ಸದಸ್ಯತ್ವ ಅಭಿಯಾನದ ಪ್ರಮುಖ ಎಂ.ಎಸ್.ಪಾಟೀಲ್ ನರಿಬೋಳ ಮಾತನಾಡಿ, ಸಮಾಜದವರು ಆಂದೋಲಾ ಶ್ರೀಗಳಿಗೆ ರಕ್ಷಣೆಗೂ ಆಗ್ರಹಿಸೋಣ ಎಂದರೆ ಅದಕ್ಕೆ ಲೆಟರ್ ಪ್ಯಾಡ್ ನೀಡುವುದಿಲ್ಲ ಎಂದು ಮೋದಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಕಾರ್ಯಕರ್ತರಾಗಿ ಉಳಿಯಲಿ, ಅದೇ ಕೆಲಸ ಮಾಡಲಿ. ಕಾಂಗ್ರೆಸ್ ಹೈಕಮಾಂಡ್ ಹೇಳಿದಂತೆ ಕೇಳುವವರು ಬೇಕಿಲ್ಲ ಎಂದು ಕಿಡಿ ಕಾರಿದರು.

ಲಕ್ಷಿö್ಮÃಕಾಂತ ಸ್ವಾದಿ, ಶ್ರವಣಕುಮಾರ ನಾಯಕ, ಸುಮಾ ಕವಾಲ್ದಾರ, ಸಿದ್ದು ಕಂದಗಲ್ ಇತರರಿದ್ದರು.