ಯಾದಗಿರಿಯಲ್ಲಿ ಶನಿವಾರ ಹಮ್ಮಿಕೊಂಡ ಅಖಿಲ ಭಾರತ ವೀರಶೈವ ಮಹಾಸಭಾದ ಜಿ¯್ಲÁ ಹಾಗೂ ತಾಲೂಕು ಘಟಕಗಳ ಅಧ್ಯP್ಷÀ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಶ್ರೀ ಡಾ.ಗಂಗಾಧರ ಸ್ವಾಮೀಜಿ, ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ಡಾ.ಸಿದ್ದರಾಜ್ ರಡ್ಡಿ ಇತರರಿದ್ದರು. 
ಜಿಲ್ಲೆ

ಮಹಾಸಭಾದಿಂದ ಗಣತಿ ಶೀಘ್ರ

ಯಾದಗಿರಿ: ಅಖಿಲ ಭಾರತ ವೀರಶೈವ ಮಹಾಸಭಾದಿಂದ ಜಾತಿಗಣತಿ ಕರ‍್ಯ ಶೀಘ್ರ ಆರಂಭಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಹೇಳಿದರು.

ನಗರದ ಸಪ್ತಪದಿ ಕನ್ವೆನ್ಷನ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡ ಮಹಾಸಭಾದ ಜಿ¯್ಲÁ-ತಾಲೂಕು ಘಟಕಗಳ ಅಧ್ಯP್ಷÀ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ಸಮಾಜ ಜನರು 50 ಲP್ಷÀನೋ ಅಥವಾ ಮೂರು ಕೋಟಿನೋ ಎಂಬುದನ್ನು ನಾವೇ ಸರ್ಕಾರಕ್ಕೆ ಒಪ್ಪಿಸುತ್ತೇವೆ ಎಂದರು.

ಈಗ ಸಿದ್ಧಗೊಂಡಿರುವ ಜಾತಿಗಣತಿ ವರದಿ ಸಮಂಜಸವಾಗಿಲ್ಲ. ಕೇವಲ 50 ಲP್ಷÀ ಜನರು ಇz್ದೆÃವೆ ಎಂಬುದು ತೋರಿಸಲಾಗಿದೆ ಎಂಬ ಮಾಹಿತಿ ಇದೆ. ಇದು ಶುದ್ಧ ತಪ್ಪು ವರದಿಯಾಗಿದೆ. ಅದಕ್ಕಾಗಿ ಮಹಾಸಭಾದಿಂದಲೇ ಜಾತಿಗಣತಿ ಆರಂಭಿಸಿ ಕೇವಲ ಮೂರು ತಿಂಗಳಲ್ಲಿ ವರದಿ ನೀಡುವುದಾಗಿ ಭರವಸೆ ನೀಡಿದರು.

ಸಮಾಜದ ಸಂಘಟನೆಗೆ ಅಧಿಕಾರ ವಿಕೇಂದ್ರಿಕರಣ ಮಾಡಲಾಗಿದೆ. ತಾಲೂಕು, ಜಿ¯್ಲÁ ಮತ್ತು ರಾಜ್ಯ ಘಟಕಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಇದಕ್ಕಾಗಿ ಸಮುದಾಯದ ಪ್ರತಿ ಮನೆಯಿಂದ ಒಬ್ಬರಂತೆಯೇ ಸದಸ್ಯರನ್ನಾಗಿ ಮಾಡುವ ಮೂಲಕ ಪ್ರತಿ ತಾಲೂಕಿನಿಂದ ಸುಮಾರು ಹತ್ತು ಸಾವಿರ ಸದಸ್ಯರನ್ನು ಮಾಡಿಸಬೇಕು ಸೂಚಿಸಿದರು.

ಸಂಪನ್ಮೂಲ ಸಮಿತಿ, ನ್ಯಾಯ ಸಮಿತಿ ಎಂದು ಹೀಗೆ ವಿವಿಧ ಸಮಿತಿಗಳು ರಚಿಸಿಕೊಳ್ಳಬೇಕು. ನ್ಯಾಯ ಸಮಿತಿಯಡಿ ಸಮಾಜದ ಕುಟುಂಬಗಳಲ್ಲಿ ತಲೆದೊರುವ ಸಣ್ಣ-ಪುಟ್ಟ ಸಮಸ್ಯೆ ಪೊಲೀಸ್ ಠಾಣೆ ಹಾಗೂ ಕೋರ್ಟ್ ಮೆಟ್ಟಿಲು ಏರದಂತೆ ನೋಡಿಕೊಲ್ಳಬೇಕು. ಸಂಘಟನೆಗೆ ಸಮಯ ನೀಡಿದರೆ ಮಾತ್ರ ಸಮಾಜ ಬೆಳೆಯಲು ಸಾಧ್ಯ. ಮುಂಬರುವ ದಿನಗಳಲ್ಲಿ ವೀರಶೈವ ಲಿಂಗಾಯತ ಸಮುದಾಯಕ್ಕೂ ಹಿಂದುಳಿದ ವರ್ಗಗಳ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಹೇಳಿದರು.

ಮಹಾಸಭಾದ ರಾಷ್ಟಿçÃಯ ಕಾರ್ಯಕಾರಿಣಿ ಸದಸ್ಯ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾದಗಿರಿಯಲ್ಲಿ ಎರಡು ಎಕರೆ ಭೂಮಿ ಸರ್ಕಾರದಿಂದ ಪಡೆದು ಅಲ್ಲಿ ವಸತಿ ನಿಲಯ, ಸಮುದಾಯ ಭವನ ಮತ್ತು ವಾಣಿಜ್ಯ ಮಳಿಗೆ ನಿರ್ಮಿಸಿ ಸಮಾಜದ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಅಲ್ಲದೆ ಬಸವೇಶ್ವರ ಮೂರ್ತಿ ಸ್ಥಾಪನೆಗೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಕರ‍್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಅಬ್ಬೆ ತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಾನಗಲ್ ಕುಮಾರಸ್ವಾಮಿಗಳು ಬಹಳ ಶ್ರಮವಹಿಸಿ ಕಟ್ಟಿದ ಈ ಮಹಾಸಭಾ ಸಮಾಜದ ಒಳಿಗಾಗಿ ಶ್ರಮಿಸಲಿ ಎಂದು ಹಾರೈಸಿದರು.

ಗುರುಮಠಕಲï ಖಾಸಾ ಮಠದ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮೀಜಿ, ಹೆಡಗಿಮದ್ರಿ ಶಾಂತಶಿವಯೋಗಿಶ್ವರ ಮಠದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ, ಶಾಸಕರಾದ ಚನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ಜಿ¯್ಲÁಧ್ಯP್ಷÀ ಚೆನ್ನಪ್ಪಗೌಡ ಮೊಸಂಬಿ, ಸಮಾಜದ ಮುಖಂಡರಾದ ರಾಚಣ್ಣಗೌಡ ಮುದ್ನಾಳ್, ವಿನಾಯಕ ಪಾಟೀಲï, ಸಿದ್ದಪ್ಪ ಹೊಟ್ಟಿ, ಅಯ್ಯಣ್ಣ ಹುಂಡೆಕಾರ, ಆರ್. ಮಹಾದೇವಪ್ಪ ಅಬ್ಬೆತುಮಕೂರು, ಸೋಮಶೇಖರ ಮಣ್ಣೂರು, ಪಾರ್ವತಿ ಕರಡ್ಡಿ, ಶ್ರೀಮತಿ ಬಿದರಿ, ನರಸರಡ್ಡಿ ಪಾಟೀಲï, ಬಸವರಾಜ ಅರುಣಿ, ಸಂಗಾರಡ್ಡಿಗೌಡ ಪೊಲೀಸ್ ಪಾಟೀಲï, ಮಹೇಶ ಆವಂಟಿ, ಅಂಬರೀಶ ಜಾಕಾ, ಡಾ.ಕಮಲಾ ಇಂದೂಧರ ಸಿನ್ನೂರ್ ಬಸಣ್ಣಗೌಡ ಮಾಲಿ ಪಾಟೀಲï, ರಾಜುಗೌಡ ಭಾಗವಹಿಸಿದ್ದರು.

ಯಡಿಯೂರು ಸಿರಿ ಸಂಗೀತ ಪಾಠಶಾಲೆಯಿಂದ ವಚನ ಗಾಯನ ನಡೆಯಿತು. ಪ್ರಧಾನ ಕಾರ್ಯದರ್ಶಿ ಡಾ.ಸಿದ್ದರಾಜ್ ರಡ್ಡಿ ಸ್ವಾಗತಿಸಿದರು. ಜಿ¯್ಲÁಧ್ಯಕ್ಷ ಚನ್ನಪ್ಪ ಗೌಡ ಮೊಸಂಬಿ ನೇತೃತ್ವದಲ್ಲಿ ಪದಾಧಿಕಾರಿಗಳು ಪ್ರಮುಖ ನಾಲ್ಕು ಬೇಡಿಕೆಗಳ ಮನವಿ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಇಡೀ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.

ವಿವಿಧ ತಾಲೂಕು ಅಧ್ಯP್ಷÀರಾದ ಸಿದ್ದಣ್ಣ ಆರಬೋಳ, ಪ್ರಕಾಶ ಅಂಗಡಿ, ರಾಜಶೇಖರ ಪಾಟೀಲï ಚಾಮನಹಳ್ಳಿ, ಪ್ರಧಾನ ಕಾರ್ಯದರ್ಶಿ ಡಾ.ಸಿದ್ದರಾಜ ರಡ್ಡಿ, ಜಿ¯್ಲÁ ಯುವ ಘಟಕದ ಅಧ್ಯP್ಷÀ ಸುರೇಶ ಜಾಕಾ ಪದಗ್ರಹಣ ಸ್ವೀಕರಿಸಿದರು.