ಬಸವಕಲ್ಯಾಣ: ಮಹಾಶಿವರಾತ್ರಿ ಪವಿತ್ರ ಹಾಗೂ ಶ್ರೇಷ್ಠ ದಿನ ಎಂದು ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ನುಡಿದರು.
ಮಹಾಶಿವರಾತ್ರಿ ನಿಮಿತ್ತ ನಗರದ ಸಂಸ್ಥಾನ ಗವಿಮಠ ಟ್ರಸ್ಟ್, ಶ್ರೀ ಮದ್ವೀರಶೈವ ಸದ್ಭೋಧನ ಸಂಸ್ಥೆ ಮತ್ತು ಸಮಸ್ತ ಸದ್ಭಕ್ತರ ಸಹಯೋಗದಲ್ಲಿ ತ್ರಿಪುರಾಂತ ಸಂಸ್ಥಾನ ಗವಿಮಠದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮಹಾಶಿವನನ್ನು ನಾವು ಇಷ್ಟಲಿಂಗ ರೂಪದಲ್ಲಿ ನಿತ್ಯ ಪೂಜಿಸುತ್ತೇವೆ. ಇಂದು ಮಹಾ ಶಿವನು ಕೈಲಾಸದಿಂದ ಭೂಲೋಕಕ್ಕೆ ಬಂದು ತನ್ನನ್ನು ಪೂಜಿಸುವ ಭಕ್ತರಿಗೆ ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿಂದ ಇಂದು ಮಹಾಶಿವನಿಗೆ ವಿಶೇಷ ಪೂಜೆ ಮಾಡಿ ಆರಾಧಿಸುವ ಪರಂಪರೆ ನಮ್ಮ ಭಾರತೀಯ ಧರ್ಮ ಹಾಗೂ ಸಂಸ್ಕೃತಿ ಎಂದು ಹೇಳಿದರು.
ಪುಣ್ಯಕೋಟಿ ಕಾಲೇಜಿನ ಪ್ರಾಚಾರ್ಯ ಸೂರ್ಯಕಾಂತ ಶೀಲವಂತ ಮಾತನಾಡಿ, ಮಹಾಶಿವರಾತ್ರಿಯ ಹಾಗೂ ಇಷ್ಟಲಿಂಗ ಪೂಜೆ ಮಹತ್ವ ತಿಳಿಸಿದರು.
ವೇದಮೂರ್ತಿ ನೀಲಕಂಠಯ್ಯ ಮಠ ಮಂಠಾಳ ಹಾಗೂ ಭಕ್ತರು ಇದ್ದರು.