ಮಹಾಲಿಂಗಪುರದ ಎಪಿಎಂಸಿ ಗಣೇಶ ದೇವಸ್ಥಾನದ ಹತ್ತಿರದ ಸಭಾಭವನದಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಮಠದ ಸಂಗಪ್ಪ ಗಡಗಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಇದ್ದರು. 
ಜಿಲ್ಲೆ

ಮಹಾಲಿಂಗಪುರದಲ್ಲಿ ಗವಿಸಿದ್ದೇಶ್ವರ ಶ್ರೀಗಳ ಪ್ರವಚನ

ಸಂತೋಷ ದೇಶಪಾಂಡೆ

ಬಾಗಲಕೋಟೆ: ನವೆಂಬರ್‌ನಲ್ಲಿ ೧೧ ದಿನಗಳ ಕಾಲ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಪ್ರವಚನ ಕಾರ್ಯಕ್ರಮ ಮಹಾಲಿಂಗಪುರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗವಿಸಿದ್ದೇಶ್ವರ ಮಠದ ಸಂಗಪ್ಪ ಗಡಗಿ ಹೇಳಿದರು.

ಮಹಾಲಿಂಗಪುರ ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಗಣೇಶ ದೇವಸ್ಥಾನದ ಹತ್ತಿರದ ಸಭಾಭವನದಲ್ಲಿ ಗುರುವಾರ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸತತ ಹನ್ನೊಂದು ದಿನಗಳ ಕಾಲ ನಿತ್ಯ ಸಂಜೆ ೬ ಗಂಟೆಯಿAದ ೭ ಗಂಟೆಯವರೆಗೆ ಪ್ರವಚನ ಬೆಳಗ್ಗೆ ೬.೩೦ ರಿಂದ ೮ ಗಂಟೆಯವರೆಗೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸಿ ಶ್ರೀಗಳು ಜನರಲ್ಲಿ ಜಾಗೃತಿ ಮೂಡಿಸುವರು. ಶೀಘ್ರದಲ್ಲಿಯೇ ಪ್ರವಚನದ ಜಾಗ ಮತ್ತು ಅಽಕೃತ ದಿನಾಂಕ ನಿರ್ಧಾರವಾಗಲಿದೆ ಎಂದರು.

ಈ ಸಂರ್ಭದಲ್ಲಿ ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಲಕ್ಷ÷್ಮಣಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಶ್ರೀಶೈಲ ಉಳ್ಳಾಗಡ್ಡಿ, ಅಶೋಕ ಅಂಗಡಿ, ಕೃಷ್ಣಗೌಡ ಪಾಟೀಲ, ಮಹೇಶ ಇಟಕನ್ನವರ, ಜಿ.ಎಸ್.ಗೊಂಬಿ ಇತರರು ಇದ್ದರು.