CID enters Mahalingapura again  
ಜಿಲ್ಲೆ

ಮಹಾಲಿಂಗಪುರಕ್ಕೆ ಮತ್ತೆ ಸಿಐಡಿ ಎಂಟ್ರಿ

ಮಹಾಲಿಂಗಪುರ: ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ 2020 ನವೆಂಬರ್ 9 ರಂದು ಜರುಗಿದ ಚುನಾವಣೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಐಡಿ ವಿಚಾರಣೆ ವಿಭಾಗದ ಉಪ ಅಧೀಕ್ಷಕಿ ಪ್ರಭಾವತಿ ಪಾಂಡುರಂಗ ನೇತೃತ್ವದ ಅಧಿಕಾರಿಗಳ ತಂಡ ಕೋರ್ಟ್ ಆದೇಶದ ಮೇರೆಗೆ ಸ್ಥಳೀಯ ಜಿಎಲ್‌ಬಿಸಿ ಅತಿಥಿಗೃಹದಲ್ಲಿ ಮಂಗಳವಾರದಿಂದ ಮರುತನಿಖೆ ಆರಂಭಿಸಿ ವಿಚಾರಣೆ ಆರಂಭಿಸಿದೆ.

ಈ ಮುಂಚೆ ಬಿ ರಿಪೋರ್ಟ ಹಾಕಿ ಪ್ರಕರಣಕ್ಕೆ ತೆರೆ ಎಳೆಯಲಾಗಿತ್ತು. ಆದರೆ ಬೆಂಗಳೂರು ಡಿವೈಎಸ್‌ಪಿ ಸೈಬರ್ ಕ್ರೈಂ ವಿಭಾಗದ ಸಿಐಡಿ ಬಿ ಾಲ್ಸ್ ಅಂತಿಮ ವರದಿ ನೀಡಿದ್ದು ಮರೆ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬನಹಟ್ಟಿ ನ್ಯಾಯಾಲಯ ಮರುತನಿಖೆ ನಡೆಸುವುದು ನ್ಯಾಯಯುತವಾದದ್ದು ಮತ್ತು ಸೂಕ್ತವಾದದ್ದು ಎಂದು ಅಭಿಪ್ರಾಯಪಟ್ಟಿದೆ. ಈ ತರಹದ ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳಲ್ಲಿನ ತೀರ್ಪನ್ನು ಸಹ ಕೋರ್ಟ್ ಗಣನೆಗೆ ತೆಗೆದುಕೊಂಡು ತೀರ್ಪು ನೀಡಿದೆ.

ಬುಧವಾರದವರೆಗೆ ಸಿಐಡಿ ತಂಡ ಪುರಸಭೆ ಸದಸ್ಯರಾದ ಗೋದಾವರಿ ಬಾಟ, ಸುಜಾತಾ ಮಾಂಗ, ಸವಿತಾ ಹುರಕಡ್ಲಿ, ಪುರಸಭೆ ಸಿಬ್ಬಂದಿಯವರಾದ ಎಂ.ಕೆ. ದಳವಾಯಿ, ವಿಕ್ರಂ ಹವಾಲ್ದಾರ, ಬಿ.ವೈ. ಮರ್ದಿ, ರಾಜೇಶ್ವರಿ ಸೋರಗಾಂವಿ, ನಿವೃತ್ತ ಸಿಬ್ಬಂದಿಯಾದ ವಿ.ಕೆ. ಕುಲಕರ್ಣಿ, ಡಿ.ಬಿ.ಪಠಾಣ, ಮರು ತನಿಖೆಗೆ ಒತ್ತಾಯಿಸಿದ ಚಾಂದನಿ ನಾಯಕ ಹಾಗೂ ಅವರ ಮೈದುನ ಅರ್ಜುನ ನಾಯಕ ಸೇರಿ ಸುಮಾರು 20 ಜನರ ವಿಚಾರಣೆ ನಡೆಸಲಾಗಿದೆ.